ಚುನಾವಣಾ ನೀತಿ ಸಂಹಿತೆ: ಚಾರ್ಮಾಡಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರು ತಪಾಸಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : 

ಚುನಾವಣಾ ನೀತಿ ಸಂಹಿತೆ ಬಿಸಿ ಜನಸಾಮಾನ್ಯರಿಗೆ ಮಾತ್ರವಲ್ಲ ರಾಜಕೀಯ ನಾಯಕರಿಗೂ ತಟ್ಟಲು ಆರಂಭವಾಗಿದೆ.

ನಿನ್ನೆಯಷ್ಟೇ ಸಿ.ಎಂ. ಬೊಮ್ಮಾಯಿಯವರು ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಅವರ ವಾಹನ ಮತ್ತು ಟ್ಯಾಗ್‌ಗಳನ್ನು ತಪಾಸಣೆಗೆ ಒಳಪಡಿಸಿದ ಘಟನೆಯ ಬೆನ್ನಲ್ಲೇ ಎ.13 (ಇಂದು) ರಂದು ಎಸ್.ಎಸ್.ಟಿ. ಟೀಂ ನ ಅಧಿಕಾರಿಗಳು ನಳಿನ್ ಕುಮಾರ್ ಕಟೀಲು ಮತ್ತು ಜಿಲ್ಲಾಧ್ಯಕ್ಷ ಸುದರ್ಶನ ಅವರ ಕಾರನ್ನು ತಪಾಸಣೆ ನಡೆಸಿದ್ದಾರೆ‌.

ಅಧಿಕಾರಿ ಜಯಕೀರ್ತಿ ಹೆಚ್.ಬಿ. ಅವರಿದ್ದ ತಂಡವು ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರಿರುವ ಇನೋವಾ ಕಾರು ಹಾಗೂ ಐದು ಪೊಲೀಸ್ ಭದ್ರತಾ ವಾಹನದೊಂದಿಗೆ ಬೆಂಗಳೂರಿನಿಂದ ಮಂಗಳೂರಿಗೆ ಚಾರ್ಮಾಡಿ ಘಾಟ್ ರಸ್ತೆ ಮೂಲಕ ಬರುತ್ತಿದ್ದಾಗ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ತಡೆದು ನಿಲ್ಲಿಸಿ ಕಾರು ಪರಿಶೀಲನೆ ನಡೆಸಿ ನಂತರ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!