ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್‌ನಲ್ಲಿ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಇದೀಗ ಎಕ್ಸಿಟ್ ಪೋಲ್ ಮೂಲಕ ಜನರು ಯಾರ ಪರ ಒಲವು ತೋರಿಸಿದ್ದಾರೆ ಎಂದು ಮಾಹಿತಿ ಹಾವ್ರಬರುತ್ತಿದೆ.
ಮ್ಯಾಟ್ರಿಸ್ ಡೇಟಾ ಪ್ರಕಾರ, ಜಾರ್ಖಂಡ್‌ನಲ್ಲಿ ಭಾರತೀಯ ಜನತಾ ಪಕ್ಷದ ಮೈತ್ರಿ ಎನ್‌ಡಿಎ ಸರ್ಕಾರ ರಚಿಸಬಹುದು ಎಂದಿದೆ. ಬಿಜೆಪಿ ಮೈತ್ರಿಕೂಟವು 42-47, ಜೆಎಂಎಂ ಮೈತ್ರಿಕೂಟವು 25-30 ಹಾಗೂ ಇತರೆ 1-4 ಸ್ಥಾನಗಳು ಬರಬಹುದು ಎಂದು ಅಂದಾಜಿಸಿದೆ.
ಜಾರ್ಖಂಡ್‌ನಲ್ಲಿ ಒಟ್ಟು 81 ವಿಧಾನಸಭಾ ಸ್ಥಾನಗಳಿದ್ದು, 44 ಸಾಮಾನ್ಯ ಮತ್ತು 28 ಪರಿಶಿಷ್ಟ ಪಂಗಡ ಮತ್ತು 9 ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಿದ್ದು, ಇದಕ್ಕೆ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಮೊದಲ ಹಂತವು ನವೆಂಬರ್ 13 ರಂದು ಮತ್ತು ಎರಡನೇ ಹಂತವು ನವೆಂಬರ್ 20 ರಂದು ನಡೆಯಿತು. ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಮತ್ತು ಎನ್‌ಡಿಎ ನಡುವೆ ತೀವ್ರ ಪೈಪೋಟಿ ನಡೆದಿತ್ತು.
ಇನ್ನು 2019 ರ ಜಾರ್ಖಂಡ್ ಚುನಾವಣೆಯಲ್ಲಿ, ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಒಳಗೊಂಡಿರುವ ಯುಪಿಎ 46 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು.