Tuesday, August 16, 2022

Latest Posts

BREAKING NEWS | ಪಂಚರಾಜ್ಯಗಳ ಚುನಾವಣೆ: ಆಯೋಗದಿಂದ ಮುಹೂರ್ತ ಫಿಕ್ಸ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿಯನ್ನು ಇಂದು ಘೋಷಣೆ ಮಾಡಿದೆ. ಮಾರ್ಚ್ 27ರಂದು ಮತದಾನ ನಡೆಯಲಿದ್ದು, ಮೇ 2ರಂದು ಪಂಚ ರಾಜ್ಯಗಳ ಚುನಾವಣೆಗೆ ಮತಏಣಿಕೆ ಕಾರ್ಯ ನಡೆಯಲಿದೆ.

ನಾಲ್ಕು ರಾಜ್ಯಗಳು ಹಾಗೂ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದರು.

ಐದೂ ರಾಜ್ಯಗಳಲ್ಲಿ ಒಟ್ಟು 18.68ಕೋಟಿ ಮತದಾರರಿದ್ದಾರೆ. 2.74 ಲಕ್ಷ ಮತದಾನ ಕೇಂದ್ರಗಳನ್ನು ತೆರೆಯಲಾಗುತ್ತದೆ . ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ಹೆಚ್ಚುವರಿ ಒಂದು ಗಂಟೆ ನೀಡಲಾಗಿದೆ ಎಂದು ಅರೋರಾ ತಿಳಿಸಿದರು.

80 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ನಾಮಪತ್ರ ಸಲ್ಲಿಸುವ ವೇಳೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು. ಮನೆ ಮನೆಗೆ ತೆರಳಿ ಪ್ರಚಾರ ನಡೆಸುವುದಕ್ಕೆ ಕೇಲವ ಐದು ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. ಚುನಾವಣೆ ನಡೆಯುವ ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನು ನಿಯೋಜಿಸಲಾಗುತ್ತಿದೆ ಎಂದರು.

ಪಶ್ಚಿಮ ಬಂಗಾಳ (ಒಟ್ಟು ಕ್ಷೇತ್ರ 294): ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನ ನಡೆಯಲಿದೆ. ಮಾರ್ಚ್ 27 ರಂದು ಮೊದಲ ಹಂತ, ಏಪ್ರೀಲ್ 1 ರಂದು ಎರಡನೇ ಹಂತ, ಏ 6 ರಂದು ಮೂರನೇ ಹಂತ, ಏ 10 ರಂದು 4ನೇ ಹಂತದ ಮತದಾನ, ಏ 17 ರಂದು 5 ನೇ ಹಂತದ ಮತದಾನ, ಏ. 22 ರಂದು 6 ನೇ ಹಂತ , ಏ. 26 ರಂದು 7 ನೇ ಹಂತ ಮತದಾನ, ಏ. 29 ರಂದು 8 ನೇ ಹಂತದ ಮತದಾನ.

ತಮಿಳುನಾಡು (ಒಟ್ಟು ಕ್ಷೇತ್ರ 234): ತಮಿಳುನಾಡಿನಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ. ಏಪ್ರೀಲ್ 6 ರಂದು ಅಲ್ಲಿ ಮತದಾನ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.

ಕೇರಳ (ಒಟ್ಟು ಕ್ಷೇತ್ರ 140): ಕೇರಳದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ಏಪ್ರೀಲ್ 6 ರಂದು ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.

ಅಸ್ಸಾಂ (ಒಟ್ಟು ಕ್ಷೇತ್ರ 126): ಅಸ್ಸಾಂನಲ್ಲಿ ಒಟ್ಟು ಮೂರು ಹಂತದ ಮತದಾನ ನಡೆಯಲಿದೆ. ಮಾರ್ಚ್ 27 ರಂದು ಒಂದನೇ ಹಂತದ ಮತದಾನ, ಏಪ್ರೀಲ್ 1 ರಂದು ಎರಡನೇ ಹಂತದ ಮತದಾನ ಹಾಗೂ ಏಪ್ರೀಲ್ 6 ರಂದು ಮೂರನೇ ಹಂತದ ಮತದಾನ ಅಸ್ಸಾಂನಲ್ಲಿ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.

ಪುದುಚೇರಿ (ಒಟ್ಟು ಕ್ಷೇತ್ರ 33, (ಆರು ಜನ ನಾಮ ನಿರ್ದೇಶಿತ): ಇಲ್ಲಿ ಕೂಡ ಒಂದೇ ಹಂತದ ಮತದಾನ ನಡೆಯಲಿದೆ, ಏಪ್ರೀಲ್ 6 ರಂದು ಮತದಾನ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss