Tuesday, August 16, 2022

Latest Posts

ತಮಿಳುನಾಡಿನಲ್ಲಿ ಚುನಾವಣೆ: ಮಧುರೈಗೆ ಬಂದಿಳಿದ ಬಿಎಸ್‌ಎಫ್ ಯೋಧರು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಸಕಲ ಸಿದ್ದತೆಗಳು ಶುರುವಾಗಿದ್ದು, ಭಾನುವಾರ ಮಧುರೈಗೆ 1,130 ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಬಂದಿಳಿದಿದ್ದಾರೆ.
ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಮಧುರೈ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಒಂಬತ್ತು ತಂಡಗಳಲ್ಲಿ ಬಿಎಸ್​ಎಫ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇಂದು ಅಅಸ್ಸಾಂನಿಂದ ಮಧುರೈ ರೈಲ್ವೆ ನಿಲ್ದಾಣಕ್ಕೆ ಬಂದ ಬಿಎಸ್ಎಫ್ ಸಿಬ್ಬಂದಿಯನ್ನು ಕೂಡಲೇ ಕೋವಿಡ್​ -19 ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಅವರನ್ನು ಚುನಾವಣಾ ಭದ್ರತೆಗಾಗಿ ವಿವಿಧ ಗುಂಪುಗಳಾಗಿ ವಿಗಂಡಿಸಿ ತೆಂಕಸಿ, ಟುಟಿಕೊರಿನ್ ಮತ್ತು ನಾಗರ್‌ಕೋಯಿಲ್ ಜಿಲ್ಲೆಗಳಿಗೆ ಕಳುಹಿಸಲಾಯಿತು.
ತಮಿಳುನಾಡಿನಲ್ಲಿ ನಿಗದಿತ ವಿಧಾನಸಭಾ ಚುನಾವಣೆಯ ಮುನ್ನ, ಮಧುರೈನ ಜಿಲ್ಲಾಧಿಕಾರಿ ಟಿ. ಅನ್ಬಳಗನ್ ಅವರ ನಿವಾಸದಲ್ಲಿ ಶನಿವಾರ ಸರ್ವಪಕ್ಷ ಸಭೆ ನಡೆಯಿತು.
234 ಸದಸ್ಯರ ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮತ ಎಣಿಕೆ ಮೇ 2 ರಂದು ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss