ದಿಗಂತ ವರದಿ ಯಲ್ಲಾಪುರ :
ಖಾಸಗಿ ಸುವಿಹಾರಿ ಬಸ್ ಹೊತ್ತಿಉರಿದ ಘಟನೆ ರಾಷ್ಟ್ರೀಯ ಹೆದ್ದಾರಿ 63 ಪಟ್ಟಣದ ಜೋಡು ಕೇರಿ ಬಳಿ ಗುರುವಾರ ನಸುಕಿನ ಜಾವ ಸಂಭವಿಸಿದೆ. ಮುಂಬಯಿಯಿಂದ ಮಂಗಳೂರುಗೆ ತೆರಳುತ್ತಿದ್ದ ಮರ್ಸಿ ಟ್ರಾವೆಲ್ಸ್ ಗೆ ಸೇರಿದ ಬಸ್ ಗೆ ನಸುಕಿನ ಜಾವ 4.30 ಕ್ಕೆ ವಿದ್ಯುತ್ ಶಾರ್ಟ್ ಸರಕ್ಯೂಟ್ ನಿಂದ ಬೆಂಕಿ ತಗುಲಿದ್ದು ಪ್ರಾಥಮಿಕ ತನಿಖೆ ಯಿಂದ ಕಂಡು ಬಂದಿದೆ.
ಈ ಖಾಸಗಿ ಬಸ್ ನಲ್ಲಿ 28 ಪ್ರಯಾಣಿಕರು ಇದ್ದರು.ಬಸ್ಸಿನಲ್ಲಿದ್ದ ಪ್ರಯಾಣಿಕರ ಸರಕು ಸಾಮಗ್ರಿ ಚೆಲ್ಲಾಪಿಲ್ಲಿ ಯಾಗಿ ಸುಟ್ಟು ಕರಕಲಾಗಿದ್ದು ,ಬಸ್ ಅಸ್ಥಿಪಂಜರ ವಾಗಿದ್ದು ಘಟನೆಯ ಭೀಕರತೆ ಗೆ ಸಾಕ್ಷಿಯಾಗಿದೆ. ಅದೃಷ್ಟ ವಶಾತ್ ಪ್ರಯಾಣಿಕರು ಯಾವದೇ ಅಪಾಯವಾಗಿಲ್ಲ.ತಕ್ಷಣವೇ ಅಗ್ನಿಶಾಮಕ್ ದಳ, ಪೊಲೀಸ್ರು ಬಂದು ಬೆಂಕಿ ನಂದಿಸುವ ಕಾರ್ಯ ಮಾಡುತಿದ್ದು, ತನಿಖೆ ಕೈಕೊಂಡಿದ್ದಾರೆ. ಹೆದ್ದಾರಿ ಯಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯವಾಗಿ ಸಾಲುಗಟ್ಟಿ ನಿಂತಿದ್ದವು.