Sunday, July 3, 2022

Latest Posts

ವಿದ್ಯುತ್ ತಂತಿಗೆ ಸಿಲುಕಿ ದೇಹದಿಂದ ಬೇರ್ಪಟ್ಟ ರುಂಡ

ದಿಗಂತ ವರದಿ ಚಾ.ನಗರ:

ವಿದ್ಯುತ್ ತಂತಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಸಮೀಪದ ಕಾಳನಹುಂಡಿ ರಸ್ತೆಯ ಕಟ್ಟೇಪುರ ಬಳಿಯ ಜಮೀನೊಂದರಲ್ಲಿ ಘಟನೆ ನಡೆದಿದೆ.
ಭಾನುವಾರ ರಾತ್ರಿ 9:30ರಲ್ಲಿ ವೇಲುಸ್ವಾಮಿ (55) ಎಂಬವರು ಜಮೀನಿನಲ್ಲಿ ನೀರು ಎತ್ತುವ ಮೋಟಾರ್ ಸ್ವಿಚ್ ಆನ್ ಮಾಡಲು ಹೋಗಿದ್ದು, ಪಕ್ಕದಲ್ಲೇ ಹಾದುಹೋಗಿರುವ 11 ಕೆವಿ ವಿದ್ಯುತ್ ತಂತಿ ತುಂಡಾಗಿ ನೇತಾಡುತ್ತಿತ್ತು. ಇದನ್ನು ಗಮನಿಸದ ಪರಿಣಾಮ ಅವರ ತಲೆಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ರುಂಡ-ಮುಂಡ ಬೇರೆಯಾಗಿ ಬಿದ್ದಿವೆ. ತಲೆ 3 ಅಡಿ ಎತ್ತರದ ಲೈನ್ ನಲ್ಲಿ ಸಿಲುಕಿ ನೇತಾಡುತ್ತಿದ್ದರೆ, ದೇಹ ಕೆಳಗಿ ಬಿದ್ದಿದೆ ಎಂದು ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss