ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಕಲಬುರಗಿ:
ಇಡೀ ರಾಜ್ಯದಲ್ಲಿ ನಮ್ಮ ಉತ್ಪಾದನೆಗಳಲ್ಲಿ ಶೇ.36 ರಷ್ಟು ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಅನ್ನು ನಾವು ಕೊಡುತ್ತಿದ್ದೇವೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲಕುಮಾರ ಹೇಳಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಸಾಮಾನ್ಯ ಬಡ ರೈತನಿಗೂ ಒಂದೆ ರೀತಿ, ಶ್ರೀಮಂತ ಅಧಿಕಾರಿ,ರಾಜಕಾರಣಿಗೂ ಒಂದೇ ರೀತಿ ಆಗಬಾರದೆನ್ನುವುದು ವೈಯಕ್ತೀಕ ನನ್ನ ಮನಸ್ಸಿನಲ್ಲಿರುವ ಭಾವನೆಯಾಗಿದೆ. ಈ ನಿಟ್ಟಿನಲ್ಲಿ ಯಾರು ಪಂಪಸೆಟ್,ನ ವಿದ್ಯುತ್ ಬಿಲ್ಲನ್ನು ಕಟ್ಟಲು ಶಕ್ತರಿದ್ದಾರೆಯೋ, ಯಾರು ಸ್ವಲ್ಪ ಆರ್ಥಿಕವಾಗಿ ಸಬಲರಾಗಿದ್ದಾರೆಯೋ, ಅಂತವರು ಸಬ್ಸಿಡಿಯನ್ನು ಬಿಟ್ಟರೆ ಇಲಾಖೆಯ ಆದಾಯ ಒಳ್ಳೆಯದಾಗುತ್ತೆ. ಅದರ ಜೊತೆಗೆ ಆ ವಿದ್ಯುತ್ ಅನ್ನು ಉಳಿದ ರೈತರಿಗೆ ಕೊಡಲು ಅನುಕೂಲವಾಗುತ್ತದೆ ಎಂದರು.
ನಾನು ಸರ್ಕಾರಿ ಅಧಿಕಾರಿಗಳಲ್ಲಿ, ಚುನಾಯಿತ ಜನಪ್ರತಿನಿಧಿಗಳಲ್ಲಿ ಹಾಗೂ ಸ್ವಲ್ಪ ದೊಡ್ಡ ಮಟ್ಟದ ಶ್ರೀಮಂತರ ಬಳಿ ವಿನಂತಿ ಮಾಡಿಕೊಳ್ಳುವುದನೆಂದರೆ, ಇವರೆಲ್ಲರೂ ತಮ್ಮ ಮನೆಗಳಿಗೆ ಹಾಗೂ ತಮ್ಮ ತೋಟಗಳಿಗೆ ಅಳವಡಿಸಿರುವ ಪಂಪಸೆಟ್,ಗಳ ಸಬ್ಸಿಡಿಯನ್ನು ಬಿಟ್ಟು,ಬಿಲ್ಲನ್ನು ಕಟ್ಟಿದರೆ, ಉತ್ಪಾದನೆಯಾಗುವಂತಹ ವಿದ್ಯುತ್ ಅನ್ನು ಹಳ್ಳಿಯಲ್ಲಿರುವಂತಹ, ಗ್ರಾಮೀಣ ಪ್ರದೇಶದಲ್ಲಿರುವಂತಹ ರೈತತರಿಗೆ ಸಬ್ಸಿಡಿಯಲ್ಲಿ ಕೊಡಲು ಅನುಕೂಲವಾಗುತ್ತದೆ ಎಂಬ ಚಿಂತನೆ ಇದೆ. ಈ ವಿಷಯದ ಬಗ್ಗೆ ಸರ್ಕಾರ ಕಾನೂನೆನೂ ಎಲ್ಲ, ಆದರೆ ನಾನು ಸಚಿವನಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.
ರೈತರಿಗೆ 7 ಗಂಟೆಗಳ ಕಾಲ ವಿದ್ಯುತ ಕೊಡಬೇಕು ಎನ್ನುವ ಹಿನ್ನಲೆಯಿಂದ ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ , ನಾವೀಗ ಆಲೋಚನೆಯನ್ನು ಮಾಡಿ, ನಿರಂತರವಾಗಿ ರೈತರಿಗೆ ವಿದ್ಯುತ ಕೊಡುವಲ್ಲಿ ಏನೇನೂ ಅಡತಡೆಗಳಿವೆಯೋ ಅದನ್ನು ಸರಿಪಡಿಸಲಾಗುವದು ಎಂದರು. ಅತೀ ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು. ನಮ್ಮ ಸರ್ಕಾರದ ಮೊದಲ ಆದ್ಯತೆ ರೈತರಿಗೆ 7
ಗಂಟೆಗಳ ಕಾಲ ಪಂಪಸೆಟಗಳಿಗೆ ವಿದ್ಯುತ ನೀಡುವದರ ಬಗ್ಗೆ ಇದೆ ಎಂದರು.
ಪಂಪಸೆಟಗನ್ನು ಹಣ ತೆಗೆದುಕೊಂಡು ಕೊಡುತ್ತಿದ್ದಾರೆ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ನಾನು ನಮ್ಮ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನವನ್ನು ನೀಡಿದ್ದೇನೆ. ಟ್ರಾನ್ಸಪಾರ್ಮರ್ಗಳು ಕೆಟ್ಟಿ ಹೋದರೆ 24 ಗಂಟೆಗಳಲ್ಲಿ ರಿಪ್ಲೆಸ್ ಮಾಡಬೇಕು.
ಗ್ರಾಮೀಣ ಭಾಗದಲ್ಲಿ ಮೊದಲು ಈ ಕಾರ್ಯವನ್ನು ಮಾಡಬೆಕೆಂದು ಹೇಳಿದರು. ಎಲ್ಲ ವಿಭಾಗಗಳಲ್ಲಿ ವಿದ್ಯುತ ಪರಿವರ್ತಕ ಬ್ಯಾಂಕ,ಗಳನ್ನು ಮಾಡಬೇಕೆಂದು ಹೇಳಲಾಗಿದೆ ಎಂದರು. ಅಧಿಕಾರಿಗಳು ಟ್ರಾನ್ಸಫಾರ್ಮಗಳಿಗೆ ದುಡ್ಡನ್ನು ತೆಗೆದುಕೊಂಡಿರುವ ವರದಿಯನ್ನು ಈಗಾಗಲೇ ಬೇರೆ ಬೇರೆ ಸಂದರ್ಭಗಳಲ್ಲಿ ನನಗೆ ಮಾಹಿತಿ ಬಂದಿದೆ. ಆದರೆ ಇನ್ನೂ ಯಾವುದೇ ಕಾರಣಕ್ಕೂ ನನ್ನ ಇಲಾಖೆಯಲ್ಲಿ ಇನ್ನುಮುಂದೆ ಸಹಿಸಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಒಂದು ವೇಳೆ ಈ ತರಕ ಘಟನೆಗಳು ನಡೆದರೆ, ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.