ದೈತ್ಯ ಸಲಗದ ಸೌಮ್ಯ ನಡವಳಿಕೆಗೆ ನೆಟ್ಟಿಗರು ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆ ಇರುತ್ತದೆ. ಯಾವುದೇ ಪ್ರಾಣಿಯಾಗಲಿ ಸುಖಾಸುಮ್ಮನೆ ತೊಂದರೆ ಕೊಡುವುದಿಲ್ಲ. ಒಂದೂ ಅದಕ್ಕೆ ಹಸಿವಾಗಿರಬೇಕು, ಇಲ್ಲ ಏನಾದರೂ ತೊಂದರೆಯಾದರೆ ಮಾತ್ರ ಅವುಗಳ ಪ್ರತಾಪ ತೋರಿಸುತ್ತವೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಆನೆಯೊಂದು ದಾರಿ ಬಿಡುವಂತೆ ಓರ್ವ ವ್ಯಕ್ತಿಯ ಬಳಿ ಸೌಮ್ಯವಾಗಿ ನಡೆದುಕೊಂಡಿದೆ.

ಆ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡುವುದು ಕ್ಷಣ ಮಾತ್ರ. ಆದರೆ ತನಗೆ ಯಾವುದೇ ಹಾನಿ ಮಾಡದೆ ದಾರಿಯಲ್ಲಿ ನಿಂತಿದ್ದ ವ್ಯಕ್ತಿಗೆ ಸದ್ದು ಮಾಡಿ ದಾರಿ ಬಿಡುವಂತೆ ಕೇಳಿದೆ. ಕೂಡಲೇ ಆನೆ ಕಂಡ ವ್ಯಕ್ತಿ ಓಡಿಬಂದಿದ್ದಾರೆ. ದಾರಿ ಕ್ಲಿಯರ್‌ ಆದ ಮೇಲೆ ಸಲಗ ತನ್ನ ಪಾಡಿಗೆ ತಾನು ಹೊರಟುಹೋಗಿದೆ. ಈ ವಿಡಿಯೋವನ್ನು ಅರಣ್ಯಾಧಿಕಾರಿ ಸುಶಾಂತ್‌ ನಂದಾ ಪೋಸ್ಟ್‌ ಮಾಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!