Wednesday, August 17, 2022

Latest Posts

ಬೈಕ್ ನಲ್ಲಿ ತೆರಳುತ್ತಿದ್ದವರ ಮೇಲೆ ಒಂಟಿ ಸಲಗ ದಾಳಿ

 ಹೊಸದಿಗಂತ ವರದಿ, ಸೋಮವಾರಪೇಟೆ:

ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಘಟನೆ ಶನಿವಾರ ಬೆಳಗ್ಗೆ ಯಡವನಾಡು ಬಳಿ ನಡೆದಿದೆ.
ಕೂಡಿಗೆ ಕ್ರೀಡಾಶಾಲೆಯ ತರಬೇತುದಾರ ವೆಂಕಟೇಶ್ ಎಂಬವರೇ ಆನೆ ದಾಳಿಗೆ ಸಿಲುಕಿದ್ದವರು. ಅದೃಷ್ಟವಶಾತ್ ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಂದಿನಂತೆ ಶನಿವಾರ ಬೆಳಗ್ಗೆ 6.15 ರ ಸುಮಾರಿಗೆ ಕ್ರೀಡಾಶಾಲೆಗೆ ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ಯಡವನಾಡು ಬಳಿಯ ಸೊಪ್ಪಿನ ಬಸವಣ್ಣ ದೇವಾಲಯದ ಸಮೀಪದ ತಿರುವಿನಲ್ಲಿ ಒಂಟಿ ಸಲವೊಂದು ದಾಳಿ ನಡೆಸಿದೆ. ಈ ಸಂದರ್ಭ ಆನೆಯ ಕೋರೆ ತಗುಲಿ ವೆಂಕಟೇಶ್ ಆವರ ಕೆನ್ನೆಯ ಭಾಗಕ್ಕೆ ಗಾಯವಾಗಿದ್ದು, ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಬೈಕ್ ಜಖಂಗೊಂಡಿದ್ದು ಕ್ರೀಡಾ ಶಾಲೆಯ ಮತ್ತೋರ್ವ ತರಬೇತುದಾರ ಅಂತೋಣಿ ಅವರು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!