Saturday, August 13, 2022

Latest Posts

ಕಾಡಾನೆ ದಾಳಿಗೆ ಕಾರ್ಮಿಕ ಬಲಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಮಡಿಕೇರಿ:

ಕಾಡಾನೆ ದಾಳಿಗೆ ಕಾರ್ಮಿಕನೊಬ್ಬ ಸಾವಿಗೀಡಾದ ಘಟನೆ ಕುಶಾಲನಗರ‌ ತಾಲೂಕಿನ ವಾಲ್ನೂರು ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ರಾಜ್ಯದ ತಿರುಚನಪಳ್ಳಿಯ ಏಳುಮಲೈ(50) ಎಂಬವರೇ ಮೃತ
ದುರ್ದೈವಿ.
ವಾಲ್ನೂರಿನ ಅಮ್ಮಂಗಲದ ಬೊಪ್ಪಂಡ ಪ್ರಭು ಗಣಪತಿ ಅವರ ತೋಟದಲ್ಲಿ ಕಾರ್ಮಿರಾಗಿದ್ದ ಇವರು ಸೋಮವಾರ ಬೆಳಗ್ಗೆ ಲೈನ್ ಮನೆ ಬಳಿಯ ಹೊಳೆಗೆ ತೆರಳಿದ್ದ ಸಂದರ್ಭ ಏಕಾಏಕಿ ದಾಳಿ ನಡೆಸಿದ ಆನೆ ತೀವ್ರವಾಗಿ ಘಾಸಿಗೊಳಿಸಿ ಕೊಂದು ಹಾಕಿದೆ. ಕಳೆದ ಒಂದು ವಾರದಿಂದ ಹಲಸಿನ ಹಣ್ಣನ್ನು ತಿನ್ನಲು ಹಿಂಡು ಹಿಂಡು ಕಾಡಾನೆಗಳು ಈ ಭಾಗದಲ್ಲಿ ಲಗ್ಗೆ ಇಡುತ್ತಿವೆ. ಗ್ರಾಮದಲ್ಲಿ ಆತಂಕ
ಮೂಡಿದ್ದು, ಕಾರ್ಮಿಕ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏಳುಮಲೈ ಅವರ ಮೃತದೇಹವನ್ನು ತಿರುಚನಪಳ್ಳಿಗೆ ಕೊಂಡೊಯ್ಯುವುದಾಗಿ ಕುಟುಂಬ ವರ್ಗ ತಿಳಿಸಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಇವರು ಕೂಡಾ ಲೈನ್ ಮನೆಯಲ್ಲೇ ವಾಸವಿದ್ದರೆನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss