Wednesday, August 17, 2022

Latest Posts

ಸಿಟಿ ರೌಂಡ್ಸ್ ಗೆ ಬಂದ ಒಂಟಿ ಸಲಗ: ಬೆಚ್ಚಿ ಬಿದ್ದ ಜನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಚಿಕ್ಕಮಗಳೂರು:

ಸೋಮವಾರ ಬೆಳಗ್ಗೆ ಒಂಟಿ ಸಲಗವೊಂದು ಸಿಟಿ ರೌಂಡ್ ಹಾಕಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.
ಕಳೆದ ಎರಡು ದಿನಗಳಿಂದ ನಗರ ಹೊರವಲಯದ ನೆಲ್ಲೂರು, ವಸ್ತಾರೆ, ಮೂಗ್ತಿಹಳ್ಳಿ ಭಾಗದಲ್ಲಿ ಕಾಣಿಸಿಕೊಂಡಿದ್ದ ಗಜರಾಜ ಇಂದು ಬೆಳಗ್ಗೆ ನೇರವಾಗಿ ನಗರದ ಕಡೆ ಹೆಜ್ಜೆ ಹಾಕಿದ್ದಾನೆ.
ಬೆಳಗ್ಗೆ 9 ಗಂಟೆ ವೇಳೆಗೆ ಜಯನಗರ ಬಡಾವಣೆಯಿಂದ ಮೂಡಿಗೆರೆ ರಸ್ತೆಗೆ ಪ್ರವೇಶಿಸಿದ ಆನೆ ರಸ್ತೆ ಮಧ್ಯೆ ನಡೆದುಕೊಂಡು ಎದುರಿನ ಕಾಫಿಡೇಗೆ ಸೇರಿದ ಎಬಿಸಿ ಕಾಫಿ ಕಂಪನಿಯ ಗೇಟನ್ನು ತಳ್ಳಿಕೊಂಡು ಆವರಣಕ್ಕೆ ತೆರಳಿ ಸುಮಾರು 10 ನಿಮಿಷದ ವರೆಗೆ ಸುತ್ತಾಡಿದೆ.
ನಂತರ ಹಿಂಭಾಗದಲ್ಲಿರುವ ಬಿದಿರು ಮೆಳೆಗಳ ನಡುವೆ ನುಸುಳಿ ನೆಲ್ಲೂರು ಕಡೆಗೆ ಪಯಣ ಬೆಳೆಸಿದೆ. ಹೊಲ, ಗದ್ದೆಗಳನ್ನು ಕ್ರಮಿಸಿ ಪಕ್ಕದಲ್ಲಿರುವ ತೊಟವೊಂದರಲ್ಲಿ ಈಗ ಬೀಡುಬಿಟ್ಟಿದೆ.
ಇಷ್ಟಾದರೂ ಅದೃಷ್ಟವಶಾತ್ ಆನೆ ಯಾರಿಗೂ ತೊಂದರೆ ಮಾಡಿಲ್ಲ. ಸಲಗದ ಸಂಚಾರ ಕಂಡು ಭಯಭೀತರಾದ ಜನರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಆನೆ ನಗರ ಸಮೀಪದಲ್ಲೇ ಇರುವ ಕಾರಣ ಪಟಾಕಿ ಸಿಡಿಸಿದರೆ ಗಾಬರಿಯಾಗಿ ನಗರದ ಕಡೆಗೆ ನುಗ್ಗಬಹುದೆಂಬ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಅದನ್ನು ಅರಣ್ಯಕ್ಕೆ ಓಡಿಸಲು ಯೋಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!