ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಜೆಯಾದರೆ ಯಾವ ಪಾನಿಪೂರಿ ಬಂಡಿ ಬಳಿ ನೋಡಿದರೂ ಜನ ಮುತ್ತಿರುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳು ಪಾನಿಪೂರಿ ಪ್ರಿಯರು ಸಿಕ್ಕಸಿಕ್ಕಾಗಲೆಲ್ಲಾ, ಪಾರ್ಟಿ, ಬೆಟ್ ಅಂತೆಲ್ಲಾ ಪಾನಿಪೂರಿ ತಿನ್ನಲು ಕಾಯುತ್ತಿರುತ್ತಾರೆ. ಇದೀಗ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಪಾನಿಪೂರಿ ಅಂದ್ರೆ ಇಷ್ಟ ಗೊತ್ತಾ? ಆನೆಯೊಂದು ಪಾನಿಪುರಿ ಗಾಡಿ ಬಳಿ ಹೋಗಿ ಬೇಕಾದಷ್ಟು ತಿಂದು ತೇಗಿದೆ. ಈ ಘಟನೆ ಕಂಡು ಅಸ್ಸಾಂನ ತೇಜ್ಪುರದ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾನಿಪುರಿ ಪ್ರಿಯರಿಗೆ ಸರಿಯಾದ ಜೋಡಿ ಸಿಕ್ಕಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
#viralvideo elephant eating a #Panipuri pic.twitter.com/OJ4Yp7tY40
— Siraj Noorani (@sirajnoorani) October 11, 2022