ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇಲ್ಲೊಂದು ಆನೆಗೆ ಎಷ್ಟು ಹಸಿವಾಗಿದೆ ಎಂದ್ರೆ ಬೈಕ್ ಮೇಲೆದ್ದ ಹೆಲ್ಮೆಟ್ ನ್ನೆ ತಿಂದು ತೇಗಿದೆ.ಇದು ನಂಬುವುದಕ್ಕೆ ಅಸಾಧ್ಯ ಎನಿಸಿದರೂ ನಂಬಲೇ ಬೇಕು.. ಏಕೆಂದರೆ ಈ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಈ ವಿಚಿತ್ರವೆನಿಸುವ ಘಟನೆ ನಡೆದಿರುವುದು ಅಸ್ಸಾಂನ ಗುವಾಹಟಿಯ ಸತ್ಗಾಂವ್ ಸೇನಾ ಶಿಬಿರದ ಸಮೀಪ.
ವಿಡಿಯೋದಲ್ಲಿ ಏನಿದೆ?..
ವ್ಯಕ್ತಿಯೊಬ್ಬ ರಸ್ತೆ ಪಕ್ಕ ಬೈಕ್ ನಿಲ್ಲಿಸಿ, ಮಿರರ್ರ ಗೆ ಹೆಲ್ಮೆಟ್ ಇಟ್ಟಿದ್ದಾನೆ. ಅದೇ ರಸ್ತೆಯಲ್ಲಿ ಸಂಭಾವಿತನಂತೆ ಬಂದ ಆನೆ ನಿಧಾನಕ್ಕೆ ತನ್ನ ಸೊಂಡಿಲಿನಿಂದ ಹೆಲ್ಮೆಟ್ ತೆಗೆದುಕೊಂಡು ಬಾಯಿಗೆ ಹಾಕಿಕೊಂಡಿದೆ ತಿಂದು ತೇಗಿದೆ. ನಂತರ ತನ್ನ ಕೆಲಸ ಆಯ್ತು ಎಂಬಂತೆ ಹೊರಟು ಹೋಗಿದೆ.
’45 ಸೆಕೆಂಡಿನ ಈ ವಿಡಿಯೋ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ‘ಪಾಪಾ ಆನೆ ತುಂಬ ಹಸಿದಿರಬಹುದೆಂದು’ ಕಮೆಂಟ್ ಮಾಡಿದ್ದಾರೆ.
Elephant eats a helmet. pic.twitter.com/mHQvTTHzX3
— Niloy (@Niloy44376362) June 9, 2021