ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕೊಡಗು:
ಸೆಪ್ಟಿಕ್ ಟ್ಯಾಂಕ್ ಗೆ ಬಿದ್ದ ಆನೆ ಮರಿಯೊಂದು ಹೊರಬರಲಾಗದೆ ಪೇಚಾಡಿದ ಘಟನೆ ದಕ್ಷಿಣ ಕೊಡಗಿನಲ್ಲಿ ನಡೆದಿದೆ.
ಗೋಣಿಕೊಪ್ಪ ಬಳಿಯ ದೇವರಪುರ ಭದ್ರಗೊಳದ ಎಂ. ಎಂ.ಸುಬ್ರಮಣಿ ಅವರ ತೋಟದೊಳಗಿರುವ ಸೆಪ್ಟಿಕ್ ಟ್ಯಾಂಕ್ ಗೆ ಮಂಗಳವಾರ ಮುಂಜಾನೆ ಆಕಸ್ಮಿಕವಾಗಿ ಮರಿ ಆನೆ ಬಂದು ಬಿದ್ದಿದೆ.
ಪುಟ್ಟ ಗುಂಡಿಯಲ್ಲಿ ಸಿಲುಕಿಕೊಂಡ ಆನೆ ಮರಿ ಹೊರ ಬರಲು ಪೇಚಾಡುತ್ತಾ ಗೋಳಿಡುತ್ತಿತ್ತು.
ಇದನ್ನು ಗಮನಿಸಿದ ತೋಟ ಮಾಲಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆನೆ ಮರಿಯನ್ನು ರಕ್ಷಿಸಿದ್ದಾರೆ.
ಪಶುವೈದ್ಯರಿಂದ ಚಿಕಿತ್ಸೆ ಪಡೆದ ಆನೆ ಮರಿ ಮತ್ತೆ ತಾಯಿ ಜೊತೆ ಸೇರಿಕೊಂಡಿದೆ.