3.58 ಶತಕೋಟಿ ಡಾಲರ್ ಮೌಲ್ಯದ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ ಎಲಾನ್‌ ಮಸ್ಕ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಿಲಿಯನೇರ್‌ ಎಲಾನ್‌ ಮಸ್ಕ್‌ ತಮ್ಮ ಒಡೆತನದ ಎಲೆಕ್ಟ್ರಿಕ್‌ ಕಾರು ತಯಾರಕ ಕಂಪನಿ ಟೆಸ್ಲಾದಲ್ಲಿನ 3.58 ಬಿಲಿಯನ್ ಡಾಲರ್‌ ಮೌಲ್ಯದ 22 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಯುಎಸ್ ಸೆಕ್ಯುರಿಟೀಸ್ ಫೈಲಿಂಗ್ ಬುಧವಾರ ತೋರಿಸಿದೆ.

ಇತ್ತೀಚಿನ ಈ ಮಾರಾಟಗಳು ಸೇರಿದಂತೆ ಮಸ್ಕ್‌ ಕಳೆದೊಂದು ವರ್ಷದಲ್ಲಿ ಒಟ್ಟೂ 40 ಬಿಲಿಯನ್‌ ಡಾಲರ್‌ ಮೌಲ್ಯದ ಟೆಸ್ಲಾ ಸ್ಟಾಕ್‌ಗಳನ್ನು ಇಲ್ಲಿಯವರೆಗೆ ಮಾರಾಟ ಮಾಡಿದ್ದಾರೆ. ಆದರೆ ಈ ಕುರಿತು ಟೆಸ್ಲಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ವಿಶ್ವದ ಅತ್ಯಂತ ಬೆಲೆಬಾಳುವ ಕಾರು ತಯಾರಕರಾದ ಟೆಸ್ಲಾ ಷೇರುಗಳು ಈ ವರ್ಷ ಪ್ರಮುಖ ವಾಹನ ತಯಾರಕರು ಮತ್ತು ಟೆಕ್ ಕಂಪನಿಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಷೇರುಗಳಲ್ಲಿ ಒಂದಾಗಿದೆ, ಏಕೆಂದರೆ ಹೂಡಿಕೆದಾರರು ಮಸ್ಕ್ ಅವರ ಟ್ವಿಟರ್ ಖರೀದಿಯು ಟೆಸ್ಲಾದಿಂದ ಅವರ ಸಮಯವನ್ನು ಬೇರೆಡೆಗೆ ತಿರುಗಿಸಬಹುದು ಎಂದು ಚಿಂತಿಸುತ್ತಾರೆ.

ಫೈಲಿಂಗ್ ಪ್ರಕಾರ ಸೋಮವಾರ ಮತ್ತು ಬುಧವಾರದ ನಡುವಿನ ಮೂರು ದಿನಗಳಲ್ಲಿ ಮಸ್ಕ್ ಷೇರುಗಳನ್ನು ಇಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!