ಟ್ವಿಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಎಲಾನ್‌ ಮಸ್ಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉದ್ಯಮ ರಂಗದ ದೈತ್ಯ ಎಲೋನ್ ಮಸ್ಕ್ ಟ್ವಿಟ್ಟರ್ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.
ಮಸ್ಕ್‌ ತಾವು ಟ್ವಿಟರ್‌ ಹುದ್ದೆಗೆ ರಾಜಿನಾಮೆ ಕೊಡಬೇಕೆ? ಬೇಡವೆ? ಎಂಬ ಬಗ್ಗೆ ಇತ್ತೀಚೆಗೆ ಸಮೀಕ್ಷೆಯೊಂದನ್ನು ಮಾಡಿದ್ದರು. ಈ ಸಮೀಕ್ಷೆಯಲ್ಲಿ ಶೇ.57.5 ಜನರು ರಾಜೀನಾಮೆ ಕೊಡಿ ಎಂದಿದ್ದರು. ಈ ವಿಚಾರವನ್ನು ಟ್ವಿಟ್ಟರ್‌ಗೆ ಪ್ರಸ್ತಾಪಿಸಿರುವ ಮಸ್ಕ್ ಹೀಗೆ ಬರೆದಿದ್ದಾರೆ, “ಟ್ವಿಟರ್‌ ಅನ್ನು ನಿರ್ವಹಿಸಬಲ್ಲ ಯಾರಾದರೂ ಮೂರ್ಖ ಸಿಕ್ಕಿದ ತಕ್ಷಣ ನಾನು CEO ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅದರ ನಂತರ, ನಾನು ಸಾಫ್ಟ್‌ವೇರ್ ಮತ್ತು ಸರ್ವರ್ ತಂಡಗಳನ್ನು ನಡೆಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಮಸ್ಕ್ ಪ್ರಕಾರ, ಸವಾಲು ಕೇವಲ CEO ಅನ್ನು ಹುಡುಕುವುದಲ್ಲ, ಬದಲಿಗೆ ಟ್ವಿಟರ್‌ನ ದೀರ್ಘಾವಧಿಯ ಕಾರ್ಯಕ್ಷಮತೆ ಹೆಚ್ಚಿಸುವ ಸಿಇಒ ಅನ್ನು ಕಂಡುಹಿಡಿಯುವುದು. ಟೆಸ್ಲಾ ಅಥವಾ ಟ್ವಿಟರ್ ಸೇರಿದಂತೆ ಯಾವುದೇ ಕಂಪನಿಯ ಸಿಇಒ ಆಗಲು ನಾನು ಬಯಸುವುದಿಲ್ಲ ಎಂದು ಅವರು ಈ ಹಿಂದೆಯೇ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!