ಮಗ ಪ್ರಪಂಚಕ್ಕೇ ಕುಬೇರ! ಸರಿಯಾದ ಮನೆಯಿಲ್ಲದೆ ಗ್ಯಾರೇಜಿನಲ್ಲಿ ಮಲಗಿದ ತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಲನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಇಷ್ಟು ಸಂಪತ್ತಿರುವ ವ್ಯಕ್ತಿಯ ಮನೆಯವರು ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ ಎಂದು ಜನ ಭಾವಿಸುತ್ತಾರೆ. ಆದರೆ ವಾಸ್ತವ ಅದಲ್ಲ, ಮಗನನ್ನು ನೋಡಲು ಹೋದಾ ಎಲನ್‌ ಮಸ್ಕ್‌ ತಾಯಿ ಗ್ಯಾರೇಜ್‌ನಲ್ಲಿ ಮಲಗಿದ್ದರು. ಈ ವಿಷಯವನ್ನು ಸ್ವತಃ ಅವರೇ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಎಲನ್ ಮಸ್ಕ್ ಅವರ ತಾಯಿ ʻಮಯೆ ಮಸ್ಕ್ʼ ಟೆಕ್ಸಾಸ್‌ನಲ್ಲಿರುವ ಅವರ ನಿವಾಸಕ್ಕೆ ಹೋಗಿದ್ದರಂತೆ ಆದರೆ, ಸೂಕ್ತ ವಸತಿ ವ್ಯವಸ್ಥೆ ಇಲ್ಲದೆ ಅಲ್ಲಿನ ‘ಸ್ಪೇಸ್ ಎಕ್ಸ್’ ಕಚೇರಿಯ ಗ್ಯಾರೇಜ್ ನಲ್ಲಿ ಮಲಗಿದ್ದೆ ಎಂದು ಮಯೆ ಮಸ್ಕ್ ಹೇಳಿದ್ದಾರೆ. ಆ ಜಾಗದಲ್ಲಿ ಯಾವುದೇ ಐಷಾರಾಮಿ ಮನೆಗಳು ಇರಲಿಲ್ಲ, ಹಾಗಾಗಿ ಗ್ಯಾರೇಜ್‌ನಲ್ಲಿ ಮಲಗಿದ್ದೆ ಎಂದು ತಿಳಿಸಿದ್ದಾರೆ. ಮಯೆ ಮಸ್ಕ್ ಕೂಡ ಅಮೆರಿಕದಲ್ಲಿ ಜನಪ್ರಿಯ ರೂಪದರ್ಶಿ. ಮಾಯೆಗೆ ಮೂವರು ಮಕ್ಕಳಿದ್ದಾರೆ.. ಎಲೆನ್, ಕಿಂಬಾಲ್ ಮತ್ತು ಟೋಸ್ಕಾ. ಆಕೆ ತನ್ನ ಪತಿ ಎರೋಲ್ ಮಸ್ಕ್ ನಿಂದ ವಿಚ್ಛೇದನ ಪಡೆದು ಸ್ವತಂತ್ರ್ಯವಾಗಿ ಜೀವನ ನಡೆಸುತ್ತಿದ್ದಾರೆ. ಈ ಘಟನೆ ತನ್ನ ಜೀವನದಲ್ಲಿ ಅತ್ಯಂತ ಕಠಿಣವಾದದ್ದು ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಎಲನ್ ಮಸ್ಕ್ ಅವರು ಸ್ವಂತ ಮನೆ ಕೂಡ ಹೊಂದಿಲ್ಲ ಎಂದು ಹೇಳಿದ್ದು ಗೊತ್ತೇ ಇದೆ. ನಾನು ನನ್ನ ಸ್ಥಿರಾಸ್ತಿಯನ್ನು ಮಾರುತ್ತಿದ್ದೇನೆ. ನನಗೆ ಸ್ವಂತ ಮನೆಯೂ ಇಲ್ಲ ಎಂದು ಎಲನ್ ಮಸ್ಕ್ ಹೇಳಿದರು. ಸದ್ಯ ಗೆಳೆಯನ ಮನೆಯಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!