ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಶ್ರೀಮಂತ ವ್ಯಕ್ತಿ, ಟೆಸ್ಲಾ ಕಾರು ಸಂಸ್ಥೆಯ ಸಿಇಒ ಎಲೋನ್ ಮಸ್ಕ್ ಅವರ ವೈಯಕ್ತಿಕ ಸಂಪತ್ತು 36.2 ಶತಕೋಟಿ ಡಾಲರ್ ನಷ್ಟು ಹೆಚ್ಚಾಗಿದೆ.
ಹರ್ಟ್ಜ್ ಗ್ಲೋಬಲ್ ಹೋಲ್ಡಿಂಗ್ಸ್ ಸಂಸ್ಥೆ ಟೆಸ್ಲಾದ 1 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಮಾಡಲು ಮುಂದಾಗಿದೆ. ಈ ವ್ಯವಹಾರದ ಬೆನ್ನಲ್ಲೇ ಎಲೋನ್ ರ ಸಂಪತ್ತು ಕೂಡ ಏರಿಕೆಯಾಗಿದೆ.
ಟೆಸ್ಲಾದ ಷೇರುಗಳು ಶೇ.14.9ರಷ್ಟು ಏರಿಕೆಯಾಗಿ, 1,045.02 ಡಾಲರ್ ಗೆ ತಲುಪಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಕಾರು ಬಾಡಿಗೆಗೆ ನೀಡಲು ಹರ್ಟ್ಜ್ ಸಂಸ್ಥೆ 1,00,000 ಎಲೆಕ್ಟ್ರಿಕ್ ವಾಹನಗಳ ಖರೀದಿ ದೃಢಪಡಿಸಿದ ನಂತರ ಟೆಸ್ಲಾದ ಮಾರುಕಟ್ಟೆ ಮೌಲ್ಯವು ಇದೇ ಮೊದಲ ಬಾರಿಗೆ ಒಂದು ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗುವ ಮೂಲಕ ಸಂಸ್ಥೆ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಮಸ್ಕ್ ಅವರ ಒಟ್ಟಾರೆ ವೈಯಕ್ತಿಕ ಸಂಪತ್ತು 288.6 ಬಿಲಿಯನ್ ಡಾಲರ್ ಆಗಿದ್ದು, ಈಗ ಎಕ್ಸಾನ್ ಮೊಬಿಲ್ ಕಾರ್ಪೊರೇಷನ್ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಾಗಿದೆ.