Wednesday, July 6, 2022

Latest Posts

ಬಿಜೆಪಿ ತೆಕ್ಕೆಗೆ ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯತ್

ಹೊಸ ದಿಗಂತ ವರದಿ, ಕಲಬುರಗಿ:

ಕಲಬುರಗಿಯ ಶ್ರೀನಿವಾಸ ಸರಡಗಿಯ ಗ್ರಾಮ ಪಂಚಾಯತ್,ನಲ್ಲಿ ತೆರುವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಶ್ರೀನಿವಾಸ ಸರಡಗಿಯ ವಾಡ೯-3ರಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಕಿಳ್ಳಿ ಜಯ ಸಾಧಿಸಿದ್ದಾರೆ.
ಗೆಲುವಿನ ನಗೆ ಬಿರಿದ ಬಳಿಕ ಮಾತನಾಡಿ, ದೇಶದ ಗ್ರಾಮಗಳು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಗ್ರಾಮೀಣಾಭಿವೃದ್ಧಿ ಯೋಜನೆಗೆ ಬಹಳ ಒತ್ತು ನೀಡಿದ್ದು, ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗಲು ಈ ಜಯ ನೆರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಉಪಾಧ್ಯಕ್ಷರಾದ ವಿನೋದ್ ಪಾಟೀಲ, ಸಂತೋಷ ಆಡೆ,ಬಿಜೆಪಿ ಮುಖಂಡರಾದ ಗೋರಕ್ ನಾಥ, ಸಂಗಮೇಶ ವಾಲಿ, ಸುಶೀಲಾಬಾಯಿ ರಾಠೋಡ ,ಪ್ರವೀಣ್ ಬಿ ಆಡೆ,ಇಂದುಬಾಯಿ ರಾಣಪ್ಪ ಮೀಸಿ, ರಾಜು ಶ್ರೀಗನ್ ಹಾಗೂ ಸರ್ವ ಸದಸ್ಯರು ಮತ್ತು ದಲಿತ ಹಿರಿಯ ಮುಖಂಡರಾದ ನಾಗಪ್ಪ ಖ್ಯಾತ ತಿಪ್ಪಣ್ಣ ಮೀಸಿ, ನಾಗೇಶ್ ಸಣಕಲ್, ನಾಗಪ್ಪ ಕಿಳ್ಳಿ ,ಮಾಳಪ್ಪ ಕಾಕನೂರ್ ,ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ಕಿಳ್ಳಿ ,ಮುಖಂಡರಾದ ರಮೇಶ್ ಮೀಸೀ,ಮಲ್ಲಿಕಾರ್ಜುನ ಶ್ರೀಗನ್ ಸುನೀಲ್ ಕಿಳ್ಳಿ ಮಲ್ಲಿಕಾರ್ಜುನ ಬೆನೂರ್ ಹಾಗೂ ಅನೇಕ ಯುವಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss