ಪಶ್ಚಿಮ ಬಂಗಾಳದಲ್ಲಿ ಹೊಸ ಏಳು ಜಿಲ್ಲೆಗಳ ಉದಯ: ದೀದಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಏಳು ಹೊಸ ಜಿಲ್ಲೆಗಳನ್ನು ಘೋಷಿಸಿದ್ದಾರೆ.
ಈ ಹಿಂದೆ ಬಂಗಾಳದಲ್ಲಿ 23 ಜಿಲ್ಲೆಗಳಿದ್ದವು. ಈಗ 30 ಕ್ಕೆ ಹೆಚ್ಚಿಸಲಾಗಿದೆ. ಹೊಸದಾಗಿ ಸುಂದರ್ಬನ್, ಇಚೆಮತಿ, ರಾಣಾಘಾಟ್, ಬಿಷ್ಣುಪುರ್, ಜಂಗಿಪುರ್, ಬೆಹ್ರಾಂಪುರ ಮತ್ತು ಬಸಿರ್ಹತ್​ ಅನ್ನು7 ಹೊಸ ಜಿಲ್ಲೆಗಳು ಹೆಸರಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಏಳು ಹೊಸ ಜಿಲ್ಲೆಗಳ ರಚನೆಯ ಕುರಿತು ಘೋಷಣೆ ಹೊರಬಿದ್ದ ಬೆನ್ನಲ್ಲೆ, ಮುಖ್ಯಮಂತ್ರಿಗಳು ಸಂಪುಟದ ಪುನರ್​ ರಚನೆ ಮಾಡಲು ಮುಂದಾಗಿದ್ದಾರೆ. ನಾಲ್ಕರಿಂದ ಐದು ಹೊಸ ಸಚಿವರನ್ನು ಸಂಪುಟಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಬಂಗಾಳ ಕ್ಯಾಬಿನೆಟ್‌ನಲ್ಲಿ ಪಂಚಾಯತ್, ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್, ಗ್ರಾಹಕ ವ್ಯವಹಾರಗಳು ಮತ್ತು ಸ್ವಸಹಾಯ ಗುಂಪುಗಳಂತಹ ಹಲವಾರು ಇಲಾಖೆಗಳು ಯಾವುದೇ ಮೀಸಲಾದ ಮಂತ್ರಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!