ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತದ ಪ್ರಜಾಸತ್ತಾತ್ಮಕ ಇತಿಹಾಸಜಗತ್ತಿಗೆ ಸ್ಫೂರ್ತಿ. ವಿಶ್ವ ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದು ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ಹೇಳಿದರು.
ಸಂವಿಧಾನದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರು ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಎಂದರೆ ಕೋಟ್ಯಂತರ ಜನರ ಭಾವನೆಗೆ ಸಂಬಂಧಿಸಿದ್ದು, ಇದು ಭಾರತದ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಸಂವಿಧಾನ ನಿರ್ಮಾತೃರಿಗೆ ಭಾರತದ ಚರಿತ್ರೆಯ ಬಗ್ಗೆ ತಿಳಿದಿತ್ತು ಎಂದರು.
ಜಗತ್ತಿನಲ್ಲಿ ದೊಡ್ಡ ದೊಡ್ಡ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಆಗುತ್ತೆ. ಆದರೆ ತುರ್ತು ಪರಿಸ್ಥಿತಿ ಭಾರತದ ಇತಿಹಾಸದಲ್ಲಿ ಒಂದು ಕಪ್ಪು ಅಧ್ಯಾಯವಾಗಿದೆ. ಎಮರ್ಜೆನ್ಸಿ ಘೋಷಿಸಿ ಭಾರತದ ಸಂವಿಧಾನ ನಿರ್ಮಾತೃರ ಕನಸನ್ನು ಮಣ್ಣು ಮಾಡಿದರು. ಪ್ರಜಾಪ್ರಭುತ್ವದ ಪರಿಕಲ್ಪನೆ ಕಾಂಗ್ರೆಸ್ ಹಾಳು ಮಾಡಿತು. ಇದರೊಂದಿಗೆ ಎಮರ್ಜೆನ್ಸಿ ವೇಳೆ ಜನರ ಹಕ್ಕನ್ನು ಕಸಿದುಕೊಳ್ಳಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಏಕತೆಗಾಗಿ 370 ವಿಧಿ ರದ್ದು
ನಮಗೆ (ಎನ್ಡಿಎ)ಗೆ ದೇಶದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು, ಭಾರತದ ಏಕತೆಯನ್ನು ಕಾಪಾಡಲು ಪ್ರಯತ್ನಿಸುತ್ತಿದ್ದೇವೆ. ಇದೇ ಸಂವಿಧಾನದ ನಿಜವಾದ ಆಶಯವಾಗಿದ್ದು, ಆದರಿಂದ ಭಾರತದ ಏಕತೆಗಾಗಿ ನಾವು 370 ವಿಧಿಯನ್ನು ತೆಗೆದು ಹಾಕಿದ್ವಿ. ಇದರೊಂದಿಗೆ ಬಡ ಜನರು ಒಂದು ಪ್ರದೇಶದಿಂದ ಮತ್ತೊಂದು ಬದಿಗೆ ತೆರಳಿದಾಗ ಏಕತೆಯ ಭಾವನೆಯಲ್ಲಿ ನಾವು ಒನ್ ನೇಷನ್ ಒನ್ ರೇಷನ್ ಕಾರ್ಡ್ ಪರಿಕಲ್ಪನೆಯನ್ನು ಜಾರಿ ಮಾಡಿದ್ದಿವಿ. ಇದರ ಪರಿಣಾಮ ದೇಶದ ಎಲ್ಲಾ ಬಡ ಜನರಿಗೆ ರೇಷನ್ ಮುಕ್ತವಾಗಿ ಸಿಗುತ್ತಿದೆ. ಇದರಿಂದ ದೇಶದ ಏಕತೆ ಮಂತ್ರ ಜಪಿಸುವ ನಾವು ಒನ್ ನೇಷನ್ ಒನ್ ಹೆಲ್ತ್ ಕಾರ್ಡ್ ಪರಿಕಲ್ಪನೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ತರಲಾಯಿತು ಎಂದರು.
ಭಾರತ ಪ್ರತಿ ಪ್ರಮುಖ ನೀತಿ ನಿರ್ಧಾರದ ಕೇಂದ್ರಬಿಂದು ಮಹಿಳೆಯರೇ ಆಗಿದ್ದು, ಭಾರತ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಸಂದರ್ಭ ವಿಶ್ವದ ಎದುರು ಮಹಿಳಾ ಅಭಿವೃದ್ಧಿ ಬಗ್ಗೆ ಮಾತನಾಡಲಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಮತ್ತು ಅವರು ಪ್ರತಿನಿಧಿತ್ವ ದೇಶಕ್ಕೆ ಗೌರವ ತರುವಂತದ್ದು. ವಿಜ್ಞಾನ ಕ್ಷೇತ್ರದಲ್ಲೂ ಮಹಿಳೆಯರ ಕೊಡುಗೆ ಭಾರತೀಯರು ಹೆಮ್ಮೆ ಪಡುವಂತದ್ದು. ಮಹಿಳೆಯರಿಗೆ ಅಧಿಕಾರ ನೀಡುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದು. ನಮ್ಮ ಸರ್ಕಾರದಲ್ಲಿ ನಾರಿ ಶಕ್ತಿ ಬಂಧನ್ ಅಧಿನಿಯಮ್ ಜಾರಿ ಮಾಡಲಾಗಿದ್ದು, ನಮ್ಮ ಮಹಿಳೆಯರ ಶಕ್ತಿಯನ್ನು ಭಾರತದ ರಾಜಕೀಯದಲ್ಲಿ ಬಳಸಿಕೊಳ್ಳಲು ಜಾರಿ ಮಾಡಲಾಯ್ತು. ಇದರಿಂದ ನಮ್ಮ ಮಹಿಳಾ ಸಂಸದೆಯರ ಸಂಖ್ಯೆ, ಅವರ ಕೊಡುಗೆ ಜಾಸ್ತಿಯಾಗಿದ್ದು, ಇವರೆಲ್ಲರ ಕೊಡುಗೆಯಿಂದ 2047ರಲ್ಲಿ ಭಾರತ ವಿಶ್ವದ 3ನೇ ಆರ್ಥಿಕ ಶಕ್ತಿಯಾಗಲಿದೆ ಎಂದರು.
ದೇಶದಲ್ಲಿನ ವಿವಿಧತೆಯಲ್ಲಿನ ಏಕತೆ
ಸಂವಿಧಾನವು ರಾಷ್ಟ್ರೀಯ ಏಕತೆಯ ಆಧಾರವಾಗಿದ್ದು, ಇದರ ನಿರ್ಮಾಣ ಕಾರ್ಯದಲ್ಲಿ ದೇಶದ ದಿಗ್ಗಜರು, ಸ್ವಾತಂತ್ರ್ಯ ಸೇನಾನಿಗಳು, ಸಾಹಿತಿಗಳು, ಶಿಕ್ಷಣ ತಜ್ಞರು, ರೈತರು, ಸಮಾಜದ ಎಲ್ಲಾ ವರ್ಗದ ಪ್ರತಿನಿಧಿಗಳಿದ್ದರು. ಇವರು ಭಾರತದ ಏಕತೆಯ ಪ್ರತೀಕವಾಗಿ ದೇಶದ ಬೇರೆ ಬೇರೆ ಪ್ರದೇಶ, ಬೇರೇ ಬೇರೆ ಕ್ಷೇತ್ರದಿಂದ ಪ್ರತಿನಿಧಿಗಳಾಗಿದ್ದು, ಇವರ ಉಸ್ತುವಾರಿಯಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇದ್ದರು. ಇದನ್ನು ದೇಶದಲ್ಲಿನ ವಿವಿಧತೆಯಲ್ಲಿನ ಏಕತೆಯಂದು ಅಂಬೇಡ್ಕರ್ ಅವರು ಬಣ್ಣಿಸಿದ್ದರು ಎಂದು ಪ್ರಧಾನಿ ಹೇಳಿದರು.
ವಿಕೃತ ಮನಸ್ಸುಗಳು ತಮ್ಮ ಸ್ವಾರ್ಥದಿಂದ ಈ ದೇಶದ ಮೂಲ ಭಾವನೆ ಮೇಲೆ ಪ್ರಹಾರ ಮಾಡಲಾಗುತ್ತಿದೆ. ಆದರೆ ವಿವಿಧತೆಯಲ್ಲಿ ಏಕತೆ ಅನ್ನೋದು ನಮ್ಮ ಗುರುತು, ಇದನ್ನು ನಾವು ಸಂಭ್ರಮಿಸುತ್ತೇವೆ. ಆದರೆ ಗುಲಾಮಿ ಮನಸ್ಥಿತಿಯ ಜನರು ವಿವಿಧತೆಯಲ್ಲಿ ವಿರೋಧಾಭಾಸ ಕಾಣುತ್ತಾರೆ. ವಿವಿಧತೆಯ ಈ ಅಮೂಲ್ಯ ಖಜಾನೆ ಇದೆ. ಇದನ್ನು ಗೌರವಿಸುವುದನ್ನು ಬಿಟ್ಟ ಅವರು ವಿರೋಧಿಸುತ್ತಾರೆ ಎಂದು ಹೇಳಿದರು. ಆದರೆ ನಾವು ವಿವಿಧತೆಯ ಉತ್ಸುವ ಮಾಡುತ್ತೇವೆ. ಇದರೊಂದಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದರು.