ರೈಲು ಸೇತುವೆ ಮೇಲಿದ್ದಾಗಲೇ ಎಮರ್ಜೆನ್ಸಿ ಚೈನ್‌ ಎಳೆದ ಪ್ರಯಾಣಿಕ: ಜೀವವನ್ನೇ ಪಣಕ್ಕಿಟ್ಟು ಸರಿಪಡಿಸಿದ ಲೋಕೋಪೈಲಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌  

ಮುಂಬೈನ ಕಲ್ಯಾಣ್‌ನಿಂದ ಗೋರಖ್‌ಪುರಕ್ಕೆ ತೆರಳುತ್ತಿದ್ದ ರೈಲು ಛಾಪ್ರಾ ಸಮೀಪದ ಟಿಟ್ವಾಲಾ ಮತ್ತು ಖಡವಲಿ ನಡುವಿನ ನದಿಯ ಸೇತುವೆ ಮೇಲಿದ್ದಾಗ ಪ್ರಯಾಣಿಕರೊಬ್ಬರು ಎಮರ್ಜೆನ್ಸಿ ಚೈನ್‌ ಎಳೆದುಬೈಕ್ಕಿದ್ದು, ಈ ವೇಳೆ ತುರ್ತು ಅಪಾಯವೆಂದು ಭಾವಿಸಿದ ಲೋಕೋಪೈಲಟ್‌ ರೈಲು ಚಲಿಸುವುದನ್ನು ತಡೆಯಲು ತುರ್ತು ಬ್ರೇಕ್‌ ಹಾಕಿದ್ದಾರೆ.
ಆದರೆ ಅದ್ದಕಿಂತ ದೊಡ್ಡ ಸಂಗತಿ ಏನೆಂದರೆ ಈ ರೀತಿ ಎಮರ್ಜೆನ್ಸಿ ಚೈನ್‌ ಎಳೆದ ಕಾರಣ, ರೈಲು ಮತ್ತೆ ಸಂಚರಿಸಲು ಸಹಾಯಕ ಲೋಕೋ ಪೈಲಟ್‌ ತಮ್ಮ ಜೀವವನ್ನೇ ಪಣಕ್ಕಿಡಬೇಕಾಗಿ ಬಂತು.
ಹೌದು, ಕಲ್ಯಾಣ್‌ನಿಂದ ಗೋರಖ್‌ಪುರಕ್ಕೆ ತೆರಳುತ್ತಿದ್ದ ರೈಲಿನ ಪ್ರಯಾಣಿಕ ಎಮರ್ಜೆನ್ಸಿ ಚೈನ್‌ ಎಳೆದ ಹಿನ್ನೆಲೆ ಸೇತುವೆಯಲ್ಲಿ ಒಂದೇ ರೈಲು ಹಳಿ ಇದ್ದ ಕಾರಣ ರೈಲು ಸಂಚಾರಕ್ಕೂ ಕೆಲಕಾಲ ಅಡಚಣೆ ಉಂಟಾಯಿತು.
ಹೀಗಾಗಿ ಎಮರ್ಜೆನ್ಸಿ ಚೈನ್‌ ಎಳೆದವರು ಯಾರು ? ಯಾಕೆ ಎಂದು ಅನ್ವೇಷಿಸಿದಾಗ ಅನಗತ್ಯವಾಗಿ ಕೆಲವು ಪ್ರಯಾಣಿಕರು ಈ ರೀತಿ ಮಾಡಿರುವುದು ರೈಲ್ವೆ ಸಿಬ್ಬಂದಿ ಗಮನಕ್ಕೆ ಬಂದಿದೆ.
ಈ ವೇಳೆ ರೈಲು ನದಿ ಸೇತುವೆಯ ಮೇಲೆ ನಿಂತ ಕಾರಣ, ಚಕ್ರ ಮತ್ತು ಇತರ ಅಂಡರ್‌ಬೆಲ್ಲಿ ಉಪಕರಣಗಳ ನಡುವಿನ ಕಿರಿದಾದ ಅಂತರದಲ್ಲಿ ಎಮರ್ಜೆನ್ಸಿ ಬಟನ್‌ ಅನ್ನು ಮರುಹೊಂದಿಸಬೇಕಾಗಿತ್ತು. ಅದಕ್ಕಾಗಿ ಗೋದಾನ್ ಎಕ್ಸ್‌ಪ್ರೆಸ್‌ನ ಹಿರಿಯ ಸಹಾಯಕ ಲೋಕೋ ಪೈಲಟ್ ಸತೀಶ್ ಕುಮಾರ್, ರೈಲಿನ ಕೆಳಗೆ ತೆವಳುತ್ತಾ ಹೋಗಿ ಎಮರ್ಜೆನ್ಸಿ ಬಟನ್‌ ಅನ್ನು ಮರುಹೊಂದಿಸಲು ಹರಸಾಹಸ ಪಡಬೇಕಾಗಿ ಬಂದಿದೆ.
ಈ ಕುರಿತು ವಿಡಿಯೋವನ್ನು ಟ್ವೀಟ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ರೈಲ್ವೆ ಸಚಿವಾಲಯ , ಲೋಕೋ ಪೈಲಟ್ ಸಾಹಸವನ್ನು ತೋರಿಸಿದ್ದಾರೆ.

ಈ ವಿಡಿಯೋದ ಜತೆಗೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು, ಅನಗತ್ಯವಾಗಿ ರೈಲುಗಳಲ್ಲಿ ಎಮರ್ಜೆನ್ಸಿ ಚೈನ್‌ ಎಳೆಯಬೇಡಿ ಎಂದು ಮನವಿ ಮಾಡಿದೆ. ಈ ವಿಡಿಯೋ ಟ್ವೀಟ್‌ ಪೋಸ್ಟ್‌ ಮಾಡಿದ ಕೆಲವೇ ಹೊತ್ತಿನಲ್ಲಿ ವೈರಲ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!