ಅಗರ್ತಲಾಗೆ ಹೊರಟಿದ್ದ ಗೃಹಸಚಿವ ಶಾ ಅವರಿದ್ದ ವಿಮಾನ ಅಸ್ಸಾಂನಲ್ಲಿ ತುರ್ತು ಭೂಸ್ಪರ್ಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮಿತ್ ಶಾ ವಿಶೇಷ ವಿಮಾನದಲ್ಲಿ ತ್ರಿಪುರಾದ ಅಗರ್ತಲಾಗೆ ತೆರಳುತ್ತಿದ್ದ ವೇಳೆ ಅಸ್ಸಾಂನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.  ಗುವಾಹಟಿ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ 10.45ರ ಸುಮಾರಿಗೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಶರ್ಮಾ ಅವರು ಅಮಿತ್ ಶಾ ಅವರನ್ನು ಸ್ವಾಗತಿಸಿದರು.

ಗುವಾಹಟಿಯ ಹೋಟೆಲ್ ರಾಡಿಸನ್ ಬ್ಲೂಗೆ ತೆರಳಿದ ಅಮಿತ್ ಶಾ ರಾತ್ರಿ ಅಲ್ಲಿಯೇ ತಂಗಿದ್ದರು. ತ್ರಿಪುರಾದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಕಸರತ್ತು ನಡೆಸಿದೆ. ಈ ಕ್ರಮದಲ್ಲಿ ತ್ರಿಪುರಾದ ಅಗರ್ತಲಾದಲ್ಲಿ ರಥಯಾತ್ರೆ ನಡೆಸಲು ರಾಜ್ಯ ಬಿಜೆಪಿ ಮುಂದಾಗಿದೆ. ಇದರಲ್ಲಿ ಭಾಗವಹಿಸಲು ಗೃಹ ಸಚಿವ ಅಮಿತ್ ಶಾ ಬುಧವಾರ ರಾತ್ರಿ ವಿಮಾನದಲ್ಲಿ ಅಗರ್ತಲಾಗೆ ತೆರಳಿದರು.

ತ್ರಿಪುರಾದ ಅಗರ್ತಲಾಕ್ಕೆ ತೆರಳುತ್ತಿದ್ದ ಅಮಿತ್ ಶಾ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡ್ ಆಗಲಿಲ್ಲ. ಹಾಗಾಗಿ ವಿಮಾನವನ್ನು ವಾಪಸ್ ತಿರುಗಿಸಿ ಗೋಪಿನಾಥ್ ಬೋರ್ಡೋಲೋಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಇಂದು ಗುರುವಾರ ಬೆಳಗ್ಗೆ ಅಮಿತ್ ಶಾ ಅಗರ್ತಲಾದ ರಥಯಾತ್ರೆ ಅಮಿತ್‌ ಶಾ ಭಾಗಿಯಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!