Wednesday, August 10, 2022

Latest Posts

ಮಿಮ್ಸ್‌ನ ತುರ್ತು ನಿಗಾ ಘಟಕದ ಕಾರಿಡಾರ್‌ನಲ್ಲೇ ಚಿಕಿತ್ಸೆ: ಡಾ.ಹರೀಶ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಮಂಡ್ಯ :

ಆಕ್ಸಿಜನ್ ಅಗತ್ಯವಿರುವ ಕೋವಿಡ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಿರುವ ಕಾರಣ ಮಿಮ್ಸ್‌ನ ತುರ್ತು ನಿಗಾ ಘಟಕದ ಕಾರಿಡಾರ್‌ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ ರೋಗಿಯ ಜೀವ ಉಳಿಸುವುದೇ ಮುಖ್ಯವಾಗಿದೆ ಎಂದು ಮಿಮ್ಸ್ ನಿರ್ದೇಶಕ
ಡಾ.ಎಂ.ಆರ್. ಹರೀಶ್ ತಿಳಿಸಿದರು.
ಮಿಮ್ಸ್‌ನಲ್ಲಿ 303 ಹಾಸಿಗೆಗಳನ್ನು ಆಕ್ಸಿಜನ್ ಬೆಡ್‌ಗಳ ಅಳವಡಿಸಲಾಗಿದೆ. ಹಾಲಿ ಇರುವ ಹಾಸಿಗೆಗಳಿಗೆ ದಿನಕ್ಕೆ 10 ಕೆ.ಎಲ್. ಆಮ್ಲಜನಕದ ಅವಶ್ಯಕತೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ಬರುತ್ತಿರುವ ಕಾರಣ ಅವರೆಲ್ಲರನ್ನೂ ವಾಪಸ್ಸು ಕಳುಹಿಸಲಾಗದೆ ಕಾರಿಡಾರ್‌ನಲ್ಲೇ ಆಮ್ಲಜನಕದ ಸಿಲಿಂಡರ್‌ಗಳನ್ನಿಟ್ಟು ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಸ್ವಲ್ಪ ಗುಣವಾದ ನಂತರ ಅವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಭೇಟಿಯಾದ ಸುದ್ಧಿಗಾರರಿಗೆ ತಿಳಿಸಿದರು.
ಮಿಮ್ಸ್‌ನಲ್ಲಿ ಇನ್ನೂ ಹೆಚ್ಚುವರಿಯಾಗಿ 150 ಹಾಸಿಕೆಗಳನ್ನು ಅಳವಡಿಸಲಾಗಿದೆ. ಆದರೆ ಆಕ್ಸಿಜನ್ ಕೊರತೆಯಿಂದಾಗಿ ಅವುಗಳ ಸಂಪರ್ಕ ಸಂಪರ್ಕ ಕಲ್ಪಿಸಿಲ್ಲಘಿ. ಮೂರು ದಿನಕ್ಕೆ ಎರಡು ಬಾರಿ 10 ಕೆ.ಎಲ್. ಆಕ್ಸಿಜನ್ ಸರಬರಾಜಾಗುತ್ತಿದೆ. ಅಂದರೆ ದಿನಕ್ಕೆ 7 ಕೆ.ಎಲ್. ಬಂದಂತಾಗಿದೆ. ಇದರಿಂದ ಹೆಚ್ಚಿನ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss