Thursday, August 18, 2022

Latest Posts

ಕಾಂಗ್ರೆಸ್ ಆಡಳಿತದಲ್ಲಿ ಬಂಜಾರ ಸಮುದಾಯದ ಅಭಿವೃದ್ದಿಗೆ ಒತ್ತು: ಶಾಸಕ ಪ್ರಿಯಾಂಕ್ ಖರ್ಗೆ

ಹೊಸದಿಗಂತ ವರದಿ, ಕಲಬುರಗಿ:‌

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಂಜಾರ ಸಮುದಾಯದ ಅಭಿವೃದ್ದಿಗೆ ಒತ್ತು ನೀಡಲಾಗಿತ್ತು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಮಹಾಶಿವರಾತ್ರಿ ಅಂಗವಾಗಿ ಸೋನ್ಯಾಲಗಿರಿ ಸುಕ್ಷೇತ್ರ ( ಬೆಡಸೂರು ) ಪಂಗರಗಾ ತಾಂಡಾದಲ್ಲಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಾನು ಸಮಾಜಕಲ್ಯಾಣ ಸಚಿವನಾಗಿದ್ದಾಗ ಎಸ್ ಸಿ ಎಸ್ ಟಿ ಸಮುದಾಯಗಳ ಅಭಿವೃದ್ದಿಗಾಗಿ ಸುಮಾರು 30,000 ಕೋಟಿ ಅನುದಾನ ತೆಗೆದಿರಿಸಿದ್ದೆ. ಬಂಜಾರ ಸಮುದಾಯದ ಸಮಗ್ರ ಅಭಿವೃದ್ದಿ ಸೇರಿದಂತೆ ಯುವಕರಿಗಾಗಿಯೇ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದೆ ಎಂದು ನೆನಪಿಸಿಕೊಂಡರು.

ತಾಂಡಾ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ, ಅರ್ಹ ಫಲಾನುಭವಿಗಳಿಗೆ ಸುಮಾರು 4500 ಟ್ಯಾಕ್ಸಿ ವಿತರಣೆ, ಬಂಜಾರ ಸಮುದಾಯದ ಉಡುಗೆ ತೊಡುಗೆ ಸಂರಕ್ಷಣೆಗೆ, ಸಂತ ಸೇವಾಲಾಲ ಭವನ ನಿರ್ಮಾಣಕ್ಕಾಗಿ ಪ್ರತಿಯೊಂದು ಭವನಕ್ಕಾಗಿ 10 ಲಕ್ಷ ರೂ.ದಂತೆ ಒಟ್ಟು 400 ಭವನಗಳನ್ನು ನಿರ್ಮಿಸಲು ಹಣ ಬಿಡುಗಡೆ ಹಾಗೂ ಸೇವಾ ಪ್ರಗತಿ ಕಾಲನಿಗಳ ಅಭಿವೃದ್ದಿಗಾಗಿ ಕ್ರಮಕೈಗೊಳ್ಳಲಾಗಿತ್ತು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ವೇದಿಕೆಯ ಮೇಲೆ ಬೀದರ್ ಸಂಸದರಾದ ಭಗವಂತ ಖೂಬಾ, ಕಲಬುರಗಿ ಸಂಸದರಾದ ಉಮೇಶ್ ಜಾಧವ, ಶಾಸಕರಾದ ಅವಿನಾಶ ಜಾಧವ, ಮಾಜಿ‌ಸ ಚಿವರಾದ ಡಾ ಶರಣಪ್ರಕಾಶ್ ಪಾಟೀಲ್ ಹಾಗೂ ರೇವುನಾಯಕ ಬೆಳಮಗಿ ಸೇರಿದಂತೆ  ವಿವಿಧ ಮಠಗಳ ಶ್ರೀಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!