ಕಂಪನಿಯ ಕೃತ್ಯಗಳಿಗೆ ಉದ್ಯೋಗಿಗಳು ಮಾತ್ರ ಹೊಣೆಗಾರರಲ್ಲ: ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ತನ್ನ ಕಂಪೆನಿಯಿಂದ ಕದ್ದ ಒಡವೆ ಖರೀದಿ ಮಾಡಿದ ಆರೋಪ ಹೊರಿಸಿ ಅಟ್ಟಿಕಾ ಗೋಲ್ಡ್ ಕಂಪನಿಯು(Attica Gold Company) ಇಬ್ಬರು ಉದ್ಯೋಗಿಗಳ ವಿರುದ್ಧ ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ಅನ್ನು ಹೈಕೋರ್ಟ್ (Karnataka High Court) ರದ್ದುಗೊಳಿಸಿದೆ.

ಈ ಕುರಿತು ಅಭಿಪ್ರಾಯಪಟ್ಟನ್ಯಾ.ಹೇಮಂತ್ ಚಂದನಗೌಡರ್ ಅವರು, ಕಂಪನಿಯ ಕೃತ್ಯಗಳಿಗೆ ಉದ್ಯೋಗಿಗಳು ಮಾತ್ರ ಹೊಣೆಗಾರರಲ್ಲ. ಕಂಪನಿಯನ್ನು ಕೈಬಿಟ್ಟು ಉದ್ಯೋಗಿಗಳನ್ನು ಮಾತ್ರ ಆರೋಪಿಯಾನ್ನಾಗಿಸುವಂತಿಲ್ಲ ಎಂದು ಹೇಳಿದೆ.

ಅಟ್ಟಿಕಾ ಗೋಲ್ಡ್ ಕಂಪನಿ ಕಳವು ಮಾಡಿದ ಒಡವೆ ಖರೀದಿ ಮಾಡಿದ ಆರೋಪ ಹೊರಿಸಿ ಇಬ್ಬರು ಉದ್ಯೋಗಿಗಳ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದರ ವಿಚಾರಣೆ ನಡೆಸಿದ ಪೊಲೀಸರು ಇಬ್ಬರು ಉದ್ಯೋಗಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ, ಕಂಪನಿಯನ್ನು ಹೊರಗಿಟ್ಟು ಉದ್ಯೋಗಿಗಳ ಮೇಲೆ ಮಾತ್ರವೇ ಪ್ರಾತಿನಿಧಿಕ ಹೊಣೆ ಮಾಡುವುದು ಸರಿಯಲ್ಲ ಎಂದು ಹೇಳಿ ಉದ್ಯೋಗಿಗಳ ವಿರುದ್ಧ ಸಲ್ಲಿಕೆಯಾಗಿದ್ದ ಆರೋಪಪಟ್ಟಿಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!