ಎಸ್ಕಾಂ ದಿವಾಳಿ ಮಾಡಿದ ಸಿದ್ದರಾಮಯ್ಯರಿಂದ ಜನರಿಗೆ ಪೊಳ್ಳು ಭರವಸೆ: ಸಚಿವ ಸುನೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿದ್ದರಾಮಯ್ಯ ಐದು ವರ್ಷದ ಕಾಲಾವಧಿಯಲ್ಲಿ ರಾಜ್ಯದ ಎಲ್ಲಾ ಎಸ್ಕಾಂಗಳನ್ನು ದಿವಾಳಿ ಆರ್ಥಿಕ ವೈಫಲ್ಯದಿಂದ ದಿವಾಳಿ ಮಾಡಿದ್ದರು. ಹುಬ್ಬಳ್ಳಿಯ ಎಸ್ಕಾಂ ದುರಾಡಳಿತದಿಂದ ದಿವಾಳಿ ಅಂಚಿಗೆ ಬಂದಿತ್ತು, ಬೊಮ್ಮಾಯಿ ಸಿಎಂ ಆದ ನಂತರ ಎಲ್ಲಾ ಎಸ್ಕಾಂಗಳಿಗೆ ಒಂಭತ್ತು ಸಾವಿರ ಕೋಟಿ ನೀಡಿದ್ದೇವೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು

ಅವರು ಶುಕ್ರವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಎಸ್ಕಾಂ ದಿವಾಳಿ ಮಾಡಿದ ಸಿದ್ದರಾಮಯ್ಯ ಜನರಿಗೆ ಪೊಳ್ಳು ಭರವಸೆ ನೀಡುತ್ತಿದ್ದಾರೆ.ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ಉಚಿತ ನೀಡುವುದಾಗಿ ಹೇಳುತ್ತಿದ್ದು, ಇಂಧನ ಇಲಾಖೆಯನ್ನು ಖಾಸಗಿಕರಣ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದರು.

ಈಗಾಗಲೇ ಸರಕಾರ 16,000 ಕೋಟಿ ರೂಪಾಯಿ ಸಬ್ಸಿಡಿ ರೂಪದಲ್ಲಿ ಕೊಡುತ್ತಿದೆ, ಸಿದ್ದರಾಮಯ್ಯ ಕಾಲಾವಧಿಯಲ್ಲಿ ಸಬ್ಸಿಡಿ ಹಣವನ್ನು ಕೂಡ ಕೊಡದೆ ಸಾಲದ ನಷ್ಟಕ್ಕೆ ತಳ್ಳಲ್ಪಟ್ಟಿತ್ತು. ನಮ್ಮ ಸರಕಾರ ಈ ಆರ್ಥಿಕ ನಷ್ಟವನ್ನು ಸರಿದೂಗಿಸುವ ಕೆಲಸ ಮಾಡಿದೆ, ಸುಳ್ಳು ಡಂಗುರ ಹೊಡೆಯುತ್ತಾ ಎಸ್ಕಾಂ ಗಳನ್ನು ಪರೋಕ್ಷವಾಗಿ ಖಾಸಗಿಕರಣ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ. ಇಂಧನ ಇಲಾಖೆಯನ್ನು ರೈತ ಮತ್ತು ಗ್ರಾಹಕ ಸ್ನೇಹಿಯಾಗಿ ಮಾಡಿದ್ದೇವೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆ ಡ್ರಗ್ಸ್ ಕಾರ್ಯಾಚರಣೆ ವಿಚಾರ

ಡ್ರಗ್ಸ್ ಸಂಬಂಧಿಸಿದಂತೆ ಸರಕಾರ ಕಠಿಣ ನಿಲುವು ತೆಗೆದುಕೊಂಡಿದೆ. ಎಷ್ಟೇ ಪ್ರಭಾವಿಗಳಾಗಿದ್ದರು ಯಾವುದೇ ಕಾರಣಕ್ಕೂ ಯಾರನ್ನು ರಕ್ಷಣೆ ಮಾಡುವುದಿಲ್ಲ.ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ, ನಮ್ಮ ಸರ್ಕಾರದ ಕಾಲಾವಧಿಯಲ್ಲಿ ಡ್ರಗ್ಸ್ ವಿರುದ್ಧ ದೊಡ್ಡ ಕಾರ್ಯಾಚರಣೆ ಮಾಡಿದ್ದೇವೆ. ಅನೇಕ ಪ್ರತಿಷ್ಠಿತರನ್ನು ಜೈಲಿಗೆ ಹಾಕಿದ್ದು ನಮ್ಮ ಸರ್ಕಾರ.

ದ.ಕ, ಉಡುಪಿ ಜಿಲ್ಲೆಯಲ್ಲೂ ಕೂಡ ಡ್ರಗ್ಸ್ ದಂಧೆ ಸಹಿಸಲು ಸಾಧ್ಯವಿಲ್ಲ, ಪೊಲೀಸರಿಗೆ ಮುಕ್ತವಾದ ಅವಕಾಶ ಕೊಟ್ಟಿದ್ದೇವೆ, ಸೂಕ್ತ ಕಾರ್ಯಚರಣೆ ಮಾಡಿ ಕಠಿಣ ನಿಲುವು ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!