ರೊಟ್ಟಿ, ಚಪಾತಿ, ದೋಸೆ, ಅನ್ನ ಎಲ್ಲದಕ್ಕೂ ಒಂದೇ ಗೊಜ್ಜು ಸಾಕು, ಯಾವ್ದು ಅಂತೀರಾ? ಎಣಗಾಯಿ ಗೊಜ್ಜು. ಹೌದು, ಇದನ್ನು ಮಾಡೋದು ತುಂಬಾನೇ ಸುಲಭ. ಆದರೆ ಒಮ್ಮೆ ಮಾಡಿದರೆ ಒಂದೇ ಹೊತ್ತಿಗೆ ಪಾತ್ರೆ ಖಾಲಿ ಆಗೋದು ಗ್ಯಾರೆಂಟಿ.. ಹೇಗೆ ಮಾಡೋದು ನೋಡಿ ಹಳ್ಳಿ ಸ್ಟೈಲ್ನ ಎಣಗಾಯಿ ಪಲ್ಯ
ಬೇಕಾಗಿರುವ ಸಾಮಾಗ್ರಿಗಳು
- ಈರುಳ್ಳಿ
- ಟೊಮ್ಯಾಟೊ
- ಹಸಿಮೆಣಸು
- ಬೆಳ್ಳುಳ್ಳಿ
- ಶುಂಠಿ
- ಚಕ್ಕೆ
- ಲವಂಗ
- ಕೊತ್ತಂಬರಿ
- ಅರಿಶಿಣ
- ಉಪ್ಪು
- ಎಣ್ಣೆ
- ಬದನೆಕಾಯಿ
ಮಾಡುವ ವಿಧಾನ - ಮೊದಲು ಮಿಕ್ಸಿಗೆ ಈರುಳ್ಳಿ,ಬೆಳ್ಳುಳ್ಳಿ,ಟೊಮ್ಯಾಟೊ,ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಕೊತ್ತಂಬರಿ,
- ಹಸಿಮೆಣಸು, ಅರಿಶಿಣ ಹಾಕಿ ರುಬ್ಬಿಕೊಳ್ಳಿ
- ಕುಕ್ಕರ್ಗೆ ಎಣ್ಣೆ,ಕರಿಬೇವು, ಬದನೆಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
- ನಂತರ ರುಬ್ಬಿದ ಮಿಶ್ರಣ ಹಾಕಿ ಮಿಕ್ಸ್ ಮಾಡಿ.
- ಉಪ್ಪು ನೋಡಿ ಕುಕ್ಕರ್ ಮುಚ್ಚಿ ಒಂದು ವಿಶಲ್ ಹೊಡೆಸಿದರೆ ಎಣಗಾಯಿ ಗೊಜ್ಜು ರೆಡಿ.