ಬಾಲಘಾಟ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರ ಎನ್‌ಕೌಂಟರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಭದ್ರತಾ ಪಡೆಗಳು ಇಂದು ಬಾಲ್‌ಘಾಟ್ ಜಿಲ್ಲೆಯಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಎನ್‌ಕೌಂಟರ್ ಮಾಡಿದ್ದಾರೆ.

ಈ ಇಬ್ಬರು ನಕ್ಸಲರನ್ನು ಹಿಡಿದುಕೊಟ್ಟವರಿಗೆ 28 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಗರ್ಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್‌ಕೌಂಟರ್ ನಡೆದಿದೆ.

ಪ್ರದೇಶ ಸಮಿತಿ ಸದಸ್ಯೆ ಸುನೀತಾ ಹಾಗೂ ಸರಿತಾ ಮೃತರು. ಮಹಿಳಾ ನಕ್ಸಲರಿಂದ ಬಂದೂಕುಗಳು, ಕಾಟ್ರಿಡ್ಜ್‌ಗಳು ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!