ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ.
ಗುರುವಾರ ಮುಂಜಾನೆ ದಕ್ಷಿಣ ಕಾಶ್ಮೀರದ ಕನಿಗಾಮ್ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದೆ. ಅಲ್-ಬದ್ರ್ ಎಂಬ ಭಯೋತ್ಪಾದಕ ಸಂಘಟನೆಗೆ ಹೊಸದಾಗಿ ಸೇರ್ಪಡೆಗೊಂಡಿದ್ದ ನಾಲ್ವರು ಉಗ್ರರು ಶೋಪಿಯಾನ್ನ ಕನಿಗಾಮ್ ಪ್ರದೇಶದಲ್ಲಿರುವುದನ್ನು ಭದ್ರತಾ ಪಡೆ ಪತ್ತೆ ಮಾಡಿತ್ತು. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ತೌಸಿಫ್ ಅಹ್ಮದ್ ಎಂಬ ಓರ್ವ ಉಗ್ರ ಶರಣಾಗಿದ್ದಾನೆ
ಸದ್ಯ ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Jammu and Kashmir: Encounter started between terrorists and security forces at Kanigam area of Shopian district of South Kashmir. More details awaited
— ANI (@ANI) May 5, 2021