ಹೊಸದಿಗಂತ ಡಿಜಿಟಲ್ ಡೆಸ್ಕ್:
16 ವರ್ಷಗಳಿಂದ ಗಾಜಾಪಟ್ಟಿಯ ಮೇಲೆ ಹಮಾಸ್ ಆಳ್ವಿಕೆ ನಡೆಸಿದ್ದು, ಈ ಆಳ್ವಿಕೆ ಇಂದು ಅಂತ್ಯವಾಗಿದೆ. ಗಾಜಾ ಸಂಪೂರ್ಣವಾಗಿ ನಮ್ಮ ವಶಕ್ಕೆ ಸಿಕ್ಕಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದ್ದಾರೆ.
ಹಮಾಸ್ ಗಾಜಾ ಮೇಲಿನ ಅಧಿಕಾರವನ್ನು ಕಳೆದುಕೊಂಡಿದೆ, ಉಗ್ರರೆಲ್ಲ ದಕ್ಷಿಣದ ಕಡೆ ಓಡಿಹೋಗುತ್ತಿದ್ದಾರೆ. ಹಮಾಸ್ ಪ್ರಾರಂಭಿಸಿದ ಯುದ್ಧಕ್ಕೆ ನಾವು ಅಂತ್ಯ ಹಾಡಿದ್ದೇವೆ, ಹಮಾಸ್ ಎಷ್ಟೆಲ್ಲಾ ನೋವು ಕೊಟ್ಟಿದೆ, ಎಷ್ಟೆಲ್ಲಾ ಜನರ ಪ್ರಾಣಹಾನಿ ಮಾಡಿದೆ. ಈ ಎಲ್ಲ ಸಾವಿಗೆ ತಕ್ಕ ಉತ್ತರ ಸಿಕ್ಕಿದೆ ಎಂದಿದ್ದಾರೆ.
ಇಸ್ರೇಲ್ ಹಮಾಸ್‌ಗೆ ತಕ್ಕ ಉತ್ತರ ನೀಡಿದ್ದು, 400ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ, ಹಮಾಸ್‌ನ ಯಾವ ತಾಣವನ್ನೂ ಉಳಿಸಿಲ್ಲ, ಎಲ್ಲದರ ಮೇಲೆ ದಾಳಿ ಮಾಡಲಾಗಿದೆ. ಇನ್ನು ಹಮಾಸ್‌ನ ಅತಿದೊಡ್ಡ ಅಡಗುತಾಣ ಆಸ್ಪತ್ರೆಯ ನೆಲಮಾಳಿಗೆಯ ಮೇಲೂ ದಾಳಿ ಮಾಡಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ. ಒತ್ತೆಯಾಳುಗಳನ್ನು ರಕ್ಷಿಸಿದ್ದೇವೆ ಎಂದು ಹೇಳಿದ್ದಾರೆ.
ಹಮಾಸ್‌ನ್ನು ಸಂಪೂರ್ಣವಾಗಿ ನಾಶ ಮಾಡುವವರೆಗೂ ಯುದ್ಧ ಮುಂದುವರಿಯಲಿದೆ ಎಂದಿದ್ದಾರೆ.