ಅಳಿವಿನಂಚಿನ ಹೆಬ್ಬಕಗಳ ಮರಿಗಳಿಗೆ ಆಪರೇಷನ್ ಸಿಂದೂರ ಸಾರಥಿಗಳ ಹೆಸರಿಟ್ಟು ಗೌರವ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಸುಧಸರಿ ಹಾಗೂ ಸಮ್ ಮರುಭೂಮಿ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ ಅಳಿವಿನಂಚಿನ ಹೆಬ್ಬಕಗಳ ಮರಿಗಳಿಗೆ ಆಪರೇಷನ್ ಸಿಂದೂರ ನಡೆಸಿದ ಯೋಧರ ಹೆಸರು ನಾಮಕರಣ ಮಾಡುವ ಮೂಲಕ ಅರಣ್ಯ ಸಂರಕ್ಷಣಾಧಿಕಾರಿಗಳು ಗೌರವ ಸಲ್ಲಿಸಿದ್ದಾರೆ.
ರಾಜಸ್ಥಾನದ ಸುಡು ಮರಳಿನಲ್ಲಿ ಜೀವಿಸುವ ಹೆಬ್ಬಕ ಸಂತತಿ ಉಳಿಸಲು ಶ್ರಮಿಸುತ್ತಿರುವ ಇಲ್ಲಿನ ಸಂತಾನೋತ್ಪತ್ತಿ ಕೇಂದ್ರದ ಸಂರಕ್ಷಣಾ ಕಾರ್ಯಕ್ರಮದಡಿ ಕಳೆದ ಒಂದು ವರ್ಷದಲ್ಲಿ 21 ಹೆಬ್ಬಕಗಳ ಮೊಟ್ಟೆಗಳು ಮರಿಗಳಾಗಿವೆ. ಕಳೆದ ಒಂದು ವರ್ಷದಲ್ಲಿ ಜನಿಸಿದ ಎಲ್ಲಾ ಮರಿಗಳಿಗೆ ಸಿಂಧೂರಕ್ಕೆ ಸಂಬಂಧಿಸಿದ ಹೆಸರುಗಳನ್ನಿಟ್ಟು ಗೌರವ ಸಲ್ಲಿಸಲಾಗಿದೆ. ಮೇ ೫ರಂದು ಜನಿಸಿದ ಮರಿಗೆ ಸೇನಾ ಕಾರ್ಯಾಚರಣೆಯ ನೆನಪಿಗಾಗಿ ’ಸಿಂಧೂರ’ ಎಂದು ಹೆಸರಿಡಲಾಗಿದೆ.
ಮೇ 9ರಂದು ಜನಿಸಿದ ಮರಿಗೆ ಸೇನಾ ಸಾಮರ್ಥ್ಯ ಪ್ರತಿನಿಧಿಸುವ ಆಟಮ್, ಮೇ 19ರಂದು ಜನಿಸಿದ ಮರಿಗೆ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಮಿಸ್ರಿ ಹೆಸರನ್ನು ಇಡಲಾಗಿದೆ. ಆಪರೇಷನ್ ಸಿಂಧೂರ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕರ್ನಲ್ ಸೋಫಿಯಾ ಖುರೇಷಿ ಅವರಿಗೆ ಗೌರವಾರ್ಥವಾಗಿ ಕ್ರಮವಾಗಿ ಮೇ 23ರಂದು ಹಾಗೂ ಮೇ 24ರಂದು ಜನಿಸಿದ ಹೆಬ್ಬಕಗಳಿಗೆ ಇಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ನಮ್ಮ ತುಳು ಭಾಷೆಯಲ್ಲಿ ಈ ಹಕ್ಕಿಗಳನ್ನು ಇದಿನೆಂಟಿಿ ಅನ್ನುವುದು.
    ಮೈದಾನದಲ್ಲಿ,ಒಣಗಿದ ಗದ್ದೆಗಳಲ್ಲಿ ಸ್ವಲ್ಪೇ ಕಸಕಡ್ಡಿ ಹುಲ್ಲು ಹಾಸಿನ ಮೇಲೆ ಮೊಟ್ಟೆ ಇಡುವ ಹಕ್ಕಿಗಳು ರಾತ್ರಿ/ಹಗಲು ಕಾವಲು ಕಾಯುತ್ತ
    ವೆ. ಏನೇ ಚಲನವಲನ ಕಂಡರೂ ಟಿಟ್ಟಿರಿ ಟಿರೀ ಎನ್ನುತ್ತ ಮೇಲೆ ಹಾರಾಡುತ್ತವೆ.ಚಲಿಸುವ ಎಲ್ಲಾ ಜೀವಿಗಳ/ಮನುಷ್ಯನ ಹತ್ತಿರ ದಾಳಿಯಿಡುವಂತೆ ಕಂಡರೂ ವಾಸ್ತವವಾಗಿ ಪಾಪದ ಜೀವಿ ತನ್ನ ಮರಿಗಳಿಗೆ ಹಾನಿ ಉಂಟು ಮಾಡದಂತೆ ಗೋಗರೆಯುವುದು.
    ಹದ್ದು,ಕಾಗೆಗಳು ಇವುಗಳಿಗೆ ಅಪಾಯಕಾರಿ.

LEAVE A REPLY

Please enter your comment!
Please enter your name here

error: Content is protected !!