ತಪ್ಪಿದ ಭಾರೀ ದುರಂತ: ಚಲಿಸುತ್ತಿದ್ದ ರೈಲಿನಿಂದ ಕಳಚಿದ ಇಂಜಿನ್

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಚಲಿಸುತ್ತಿದ್ದ ರೈಲಿನ ಇಂಜಿನ್ ಕಳಚಿಹೋದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.

ಶಿವಮೊಗ್ಗದ ಸಮೀಪ ಬಿದರೆ ಬಳಿ ಬರುತ್ತಿದ್ದಂತೆ ತಾಳಗುಪ್ಪ- ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಬೋಗಿಗಳಿಂದ ಇಂಜಿನ್ ಬೇರ್ಪಟ್ಟಿದೆ. ಬೋಗಿಗಳನ್ನು ಬಿಟ್ಟು ಇಂಜಿನ್ ಸ್ವಲ್ಪ ದೂರ ಚಲಿಸಿದೆ. ಕೂಡಲೇ ರೈಲ್ವೇ ಅಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿಗಳು, ಸಮಸ್ಯೆ ಬಗೆಹರಿಸಿದ್ದಾರೆ. ಕೊನೆಗೆ ಬೆಂಗಳೂರು ಕಡೆಗೆ ರೈಲು ಚಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!