spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಂಜಿನಿಯರ‍್ಸ್ ದಿನ: ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಮೆಗೆ ‘ಎಂಜಿನಿಯರ್’ ಬೊಮ್ಮಾಯಿ ಮಾಲಾರ್ಪಣೆ

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಎಂಜಿನಿಯರ್ ದಿನದ ಅಂಗವಾಗಿ ಕೆ.ಆರ್. ವೃತ್ತದಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಮೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಲಾರ್ಪಣೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಎಂಜಿನಿಯರ್ ಎಂದು ಯಾರಾದರೂ ಕರೆದರೆ ನನಗೆ ತುಂಬಾನೇ ಸಂತೋಷವಾಗುತ್ತದೆ ಎಂದು ಹೇಳಿ ಎಂಜಿನಿಯರ್‌ಗಳಿಗೆ ಶುಭ ಹಾರೈಸಿದರು. ವಿಶ್ವೇಶ್ವರಯ್ಯ ಅವರ ಜೀವನ ಮೌಲ್ಯ, ಬುದ್ಧಿವಂತಿಕೆ, ಶ್ರಮಿಕ ಮನೋಭಾವವನ್ನು ನಾವು ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದರು.

ವಿಶ್ವೇಶ್ವರಯ್ಯ ಅವರು ಬದುಕಿದ್ದಿದ್ದರೆ ಅವರು ಯಾವ ರೀತಿ ಯೋಚಿಸುತ್ತಿದ್ದರೋ ಅದೇ ರೀತಿ ಯೋಚಿಸಿ ನಾವು ಮುಂದುವರಿಯಬೇಕಿದೆ. ಸರ್ಕಾರದ ಹಣ ಕೂಡ ಸಾರ್ವಜನಿಕರದ್ದೆ. ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವಾಗ ತಮ್ಮ ಸ್ವಂತ ಮನೆ ರೀತಿಯಲ್ಲಿ ಗುಣಮಟ್ಟದ ವಸ್ತುಗಳನ್ನು ಹಾಕಿ ನಿರ್ಮಿಸಬೇಕು ಎಂದರು.

ವಿಶ್ವೇಶ್ವರಯ್ಯನವರು ಈ ನಾಡಿನ ಭವ್ಯ ಏಳಿಗೆಗೆ ಕನಸು ಕಂಡಂತವರು, ಅವರಡಿಯಲ್ಲಿ ಹಲವಾರು ಕಾರ್ಯಕ್ರಮಗಳು ಆಗಿವೆ, ಅವರ ಸಾಧನೆ ಹಲವಾರು. ಕೆಆರ್ ಎಸ್ ಡ್ಯಾಂನಿಂದ ಹಿಡಿದು ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳು, ಕಾರ್ಖಾನೆಗಳು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮಹಿಳಾ ಮೀಸಲಾತಿ ಕುರಿತು ಪ್ರಗತಿಪರ ಚಿಂತನೆಯನ್ನು ನಡೆಸಿದ್ದ ಸರ್ ಎಂ ವಿಶ್ವೇಶ್ವರಯ್ಯನವರಿಗೆ ನಮನಗಳನ್ನು ಸಲ್ಲಿಸುವ ದಿನವಿಂದು ಎಂದು ಹೇಳಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss