Sunday, October 2, 2022

Latest Posts

ಟಿ 20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್:‌ ಸ್ಟಾರ್‌ ಆಟಗಾರನಿಗೆ ಕೋಕ್!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ಪ್ರಾರಂಭವಾಗುವ ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಗೆ ಇಂಗ್ಲೆಂಡ್ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಅಚ್ಚರಿಯೆಂದರೆ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್ ಜೇಸನ್ ರಾಯ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ಭಾರತ ವಿರುದ್ಧದ ಸರಣಿಯೂ ಸೇರಿದಂತೆ ಕೆಲ ತಿಂಗಳಿಂದ ರಾಷ್ಟ್ರೀಯ ತಂಡದಲ್ಲಿ ರಾಯ್‌ ಗಮನ ಸೆಳೆಯುವ ಆಟವಾಡುವಲ್ಲಿ ವಿಫಲರಾಗಿದ್ದರು. ದಿ ಹಂಡ್ರೆಡ್‌ ಟೂರ್ನಿಯಲ್ಲಿಯೂ ಸಹ ರಾಯ್ ಕಳಪೆ ಆಟ ಮುಂದುವರೆದಿತ್ತು. ಜೇಸನ್ ರಾಯ್ ಅವರ ಪ್ರಸ್ತುಪ ಫಾರ್ಮ್‌ ಗಮನದಲ್ಲಿಸಿಕೊಂಡ ಆಯ್ಕೆ ಸಮಿತಿ ಟಿ 20 ವಿಶ್ವಕಪ್‌ ತಂಡದಿಂದ ಕೈಬಿಟ್ಟಿದೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ಪರವ ಟಿ 20 ಗೆ ಪಾದಾರ್ಪಣೆ ಮಾಡಿದ ಯುವ ಆಟಗಾರ ಫಿಲ್ ಸಾಲ್ಟ್‌ಗೆ ರಾಯ್‌ ಜಾಗದಲ್ಲಿ ಸ್ಥಾನ ನೀಡಲಾಗಿದೆ. ಯುಎಇಯಲ್ಲಿ 2021 ರಲ್ಲಿ ನಡೆದ T20 ವಿಶ್ವಕಪ್‌ ನಿಂದೀಚೆಗೆ 11 ಚುಟುಕು ಪಂದ್ಯಗಳನ್ನಾಡಿರುವ ರಾಯ್ 18.72 ಸರಾಸರಿಯಲ್ಲಿ ಕೇವಲ 206 ರನ್ ಕಲೆಹಾಕಿದ್ದಾರೆ.
ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್ ತಂಡಕ್ಕೆ ಮರಳಿದ್ದಾರೆ. ಜೋಸ್ ಬಟ್ಲರ್ ಅವರು ನಾಯಕರಾಗಿ ತಮ್ಮ ಮೊದಲ ಜಾಗತಿಕ ಪಂದ್ಯಾವಳಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

T20 ವಿಶ್ವಕಪ್ ಗೆ ಇಂಗ್ಲೆಂಡ್ ತಂಡ:
ಜೋಸ್ ಬಟ್ಲರ್ (ಸಿ), ಮೊಯಿನ್ ಅಲಿ, ಜೊನಾಥನ್ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್.
ರಿಸರ್ವ್ ಆಟಗಾರರು: ಟೈಮಲ್ ಮಿಲ್ಸ್, ಲಿಯಾಮ್ ಡಾಸನ್ ಮತ್ತು ರಿಚರ್ಡ್ ಗ್ಲೀಸನ್. (ANI)

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!