ಏಕದಿನದಲ್ಲಿ ಬರೋಬ್ಬರಿ 498 ರನ್‌ ಕಲೆಹಾಕಿದ ಇಂಗ್ಲೆಂಡ್!‌ ಆಂಗ್ಲರ ಅಬ್ಬರಕ್ಕೆ ದಾಖಲೆಗಳು ಧೂಳಿಪಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಮ್‌ಸ್ಟೆಲ್‌ವೀನ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ದಾಖಲೆಗಳನ್ನು ಧೂಳಿಪಟ ಮಾಡಿದೆ.
ಹಾಲಿ ವಿಶ್ವಚಾಂಪಿಯನ್‌ ತಂಡ ಇಂಗ್ಲೆಂಡ್ 498-4 ಮೊತ್ತ ಕಲೆಹಾಕುವುದರ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ಮೊತ್ತ ಕಲೆಹಾಕಿದ ಸಾಧನೆ ಬರೆದಿದೆ. ಇಂಗ್ಲೆಂಡ್‌ ಪರ ಮೂವರು ಬ್ಯಾಟ್ಸ್ಮನ್‌ ಗಳು ಶತಕ ಸಿಡಿಸಿದರು. ಪಂದ್ಯದಲ್ಲಿ ಹಲವಾರು ದಾಖಲೆಗಳು ನಿರ್ಮಾಣಗೊಂಡವು.
2018 ರಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 481-6 ರನ್‌ ಗಳಿಸಿ ಏಕದಿನದಲ್ಲಿ ಗರಿಷ್ಠ ರನ್‌ ಕಲೆಹಾಕಿದ್ದ ಇಂಗ್ಲೆಂಡ್‌ ತನ್ನದೇ ದಾಖಲೆಯನ್ನು ಮುರಿದಿದೆ. ಇಂಗ್ಲೆಂಡ್ ಪರ ಫಿಲ್‌ ಸಾಲ್ಟ್‌, ಡೇವಿಡ್‌ ಮಲಾನ್‌ ಹಾಗೂ ಜೋಸ್‌ ಬಟ್ಲರ್‌ ಶತಕ ಸಿಡಿಸಿದರು.‌ ಲಿವಿಂಗ್‌ ಸ್ಟೋನ್‌ ಸಹ ಡೆತ್‌ ಓವರ್‌ ಗಳಲ್ಲಿ ಅಬ್ಬರಿಸಿದರು. ಕೇವಲ 47 ಎಸೆತಗಳಲ್ಲಿ 162 ರನ್ ಕಲೆಹಾಕಿದ ಜೋಸ್ ಬಟ್ಲರ್ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದರು. ಅವರ ಇನ್ನಿಂಗ್ಸ್‌ ನಲ್ಲಿ ಏಳು ಸಿಕ್ಸರ್ ಮತ್ತು 14 ಬೌಂಡರಿಗಳಿದ್ದವು. ಬಟ್ಲರ್‌ 65 ಎಸೆತದಲ್ಲಿ 150 ರನ್‌ ಸಿಡಿಸಿದ್ದು ಏಕದಿನ ಕ್ರಿಕೆಟ್‌ ನಲ್ಲಿ ಎರಡನೇ ಅತಿವೇಗದ 150 ರನ್‌ ಗಳಾಗಿದೆ. ಈ ಹಿಂದೆ ಎಬಿಡಿ ವಿಲ್ಲಿಯರ್ಸ್‌ ವೆಸ್‌ ಇಂಡೀಸ್‌ ವಿರುದ್ಧ 64 ಎಸೆತಗಳಲ್ಲಿ 150 ರನ್‌ ಸಿಡಿಸಿದ್ದರು.
ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 17 ಎಸೆತಗಳಲ್ಲಿ ಏಕದಿನ ಇತಿಹಾಸದಲ್ಲೇ  ಎರಡನೇ ಅತಿವೇಗದ 50 ರನ್ ಗಳಿಸಿದರು. ಇಂಗ್ಲೆಂಡ್‌ ಇನ್ನಿಂಗ್ಸ್‌ ನಲ್ಲಿ ಬರೋಬ್ಬರಿ 26 ಸಿಕ್ಸರ್‌ಗಳು ಮತ್ತು 36 ಬೌಂಡರಿಗಳಿದ್ದವು. ಈ ಮೂಲಕ ತನ್ನದೇ ದಾಖಲೆಯನ್ನು ಇಂಗ್ಲೆಂಡ್ ಮುರಿದಿದೆ. 2019ರ ವಿಶ್ವಕಪ್‌ ನಲ್ಲಿ ಇಂಗ್ಲೆಂಡ್‌ 25 ಸಿಕ್ಸರ್‌ ಸಿಡಿಸಿತ್ತು.
ಡೇವಿಡ್ ಮಲಾನ್‌ ಮೂರು ಮಾದರಿಯಲ್ಲಿ ಶತಕ ಸಿಡಿಸಿದ ಇಂಗೆಂಡ್‌ ನ 2ನೇ ಆಡಗಾರ ಎನಿಸಿಕೊಂಡರು. ಈ ಹಿಂದೆ ಜೋಸ್‌ ಬಟ್ಲರ್‌ ಈ ಸಾಧನೆ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!