ಡಿಜಿಟಲ್‌ ಕರೆನ್ಸಿ ಜಾರಿಗೆ ತರಲು ಯೋಚಿಸುತ್ತಿದೆ ಇಂಗ್ಲೆಂಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಕಾಲಘಟ್ಟದಲ್ಲಿ ಪ್ರಸಿದ್ಧಿಪಡೆದ ಬಿಟ್‌ಕಾಯಿನ್‌ ಥರದ ಡಿಜಿಟಲ್‌ ಕರೆನ್ಸಿಗಳಿಗೆ ಪರ್ಯಾಯವಾಗಿ ಡಿಜಿಟಲ್‌ ಕರೆನ್ಸಿಗಳನ್ನು ತರಲು ಜಗತ್ತಿನ ಹಲವು ದೇಶಗಳು ಚಿಂತಿಸುತ್ತಿವೆ. ಭಾರತವು ಇ-ರುಪೀ ಎಂಬ ಹೆಸರಿನ ಡಿಜಿಟಲ್‌ ಕರೆನ್ಸಿಯನ್ನು ಈಗಾಗಲೇ ಜಾರಿಗೆ ತಂದಿದ್ದು ಇದೀಗ ಇಂಗ್ಲೆಂಡ್ ಕೂಡ ಬಿಟ್‌ಕಾಯಿನ್‌ ಗೆ ಪರ್ಯಾಯವಾಗಿ ತನ್ನದೇ ಡಿಜಿಟಲ್‌ ಕರೆನ್ಸಿಯನ ನು ತರಲು ಯೋಚಿಸುತ್ತಿದೆ. ʼ

ಈ ಕುರಿತು ಇಂಗ್ಲೆಂಡಿನ ಸೆಂಟ್ರಲ್‌ ಬ್ಯಾಂಕ್‌ ಜನಾಭಿಪ್ರಾಯವನ್ನು ಕೇಳುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. “ಕರೆನ್ಸಿಗೆ ಪರ್ಯಾಯವಾಗಿ, ವಿಶ್ವಾಸಾರ್ಹ ಮತ್ತು ಸುಲಭವಾಗಿ ಬಳಸಬಹುದಾದ ಡಿಜಿಟಲ್‌ ಪೌಂಡ್‌ ಅನ್ನು ತರುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಇದು ಬ್ಯಾಂಕ್‌ ಆಫ್‌ ಇಂಗ್ಲೆಂಡಿನಿಂದ ಬೆಂಬಲಿತವಾಗಿರುತ್ತದೆ ಎಂದು ಖಜಾನೆ ಮುಖ್ಯಸ್ಥ ಜೆರೆಮಿ ಹಂಟ್ ಹೇಳಿದ್ದಾರೆ. ಪ್ರಸ್ತುತ ಯುಕೆ ಪ್ರಧಾನ ಮಂತ್ರಿಯಾಗಿರೋ ರಿಷಿ ಸುನಕ್ ಅವರು ಖಜಾನೆ ಮುಖ್ಯಸ್ಥರಾಗಿದ್ದಾಗ ಈ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಗಿತ್ತು. ʼಬ್ರಿಟ್‌ ಕಾಯಿನ್‌ʼ ಎಂದು ಕರೆಯಲ್ಪಡುವ ಈ ಡಿಜಿಟಲ್‌ ಕರೆನ್ಸಿಯನ್ನು ಪ್ರಸ್ತುತ ಜಾರಿಗೆ ತರಲು ಇದೀಗ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

ಪ್ರಸ್ತಾವಿತ ಡಿಜಿಟಲ್ ಕರೆನ್ಸಿಯನ್ನು ಪೌಂಡ್‌ಗಳಲ್ಲಿ ಗುರುತಿಸಲಾಗುವುದು, 10 ಪೌಂಡ್‌ಗಳ ಡಿಜಿಟಲ್ ಕರೆನ್ಸಿ ಯಾವಾಗಲೂ 10-ಪೌಂಡ್ ನೋಟಿಗೆ ಸಮನಾಗಿರುತ್ತದೆ ಮತ್ತು ಡಿಜಿಟಲ್ ವ್ಯಾಲೆಟ್‌ನಲ್ಲಿ ಇಡಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ. ಇದನ್ನು ಎಲೆಕ್ಟ್ರಾನಿಕ್‌ ವಿಧಾನದಲ್ಲಿ ಸರಕು ಮತ್ತು ಸೇವೆಗಳಿಗೂ ಪಾವತಿಸಬಹುದಾಗಿದೆ ಎಂದು ಬ್ಯಾಂಕ್‌ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!