ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್‌ಗಳಿಂದ ಸೋಲು ಅನುಭವಿಸಿ ಎಡವಿದ್ದ ಇಂಗ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ ಇಂದು ನಡೆದ ಪಂದ್ಯದಲ್ಲಿ 137 ರನ್ಗಳ ಭಾರೀ ಅಂತರದಿಂದ ಜಯ ದಾಖಲಿಸುವ ಮೂಲಕ ಮತ್ತೆ ಟ್ರ್ಯಾಕ್ ಗೆ ಮರಳಿದೆ.
ಇಂದು ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಂಗ್ಲ ಪಡೆ, ಡೇವಿಡ್ ಮಲಾನ್ (140 ರನ್, 107 ಎಸೆತ, 16 ಬೌಂಡರಿ, 5 ಸಿಕ್ಸರ್), ಜೋ ರೂಟ್ (82 ರನ್, 68 ಎಸೆತ, 8 ಬೌಂಡರಿ, 1 ಸಿಕ್ಸರ್) ಜಾನಿ ಬೈರ್ಸ್ಟೋ (52 ರನ್, 59 ಎಸೆತ, 8 ಬೌಂಡರಿ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 364 ರನ್ಗಳ ಬೃಹತ್ ಗುರಿಯನ್ನು ದಾಖಲಿಸಿತು.
ಆಂಗ್ಲ ಪಡೆ ನೀಡಿದ ಗುರಿ ಬೆನ್ನತ್ತಿದ ಬಾಂಗ್ಲಾ, 48 ಓವರ್ಗಳಲ್ಲಿ 227 ರನ್ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾ ಪರ ಲಿಟನ್ ದಾಸ್ (76 ರನ್, 66 ಎಸೆತ, 7 ಬೌಂಡರಿ, 2 ಸಿಕ್ಸರ್), ಮುಶ್ಫಿಕರ್ ರಹೀಮ್ (54 ರನ್, 64 ಎಸೆತ, 4 ಬೌಂಡರಿ), ತೌಹಿದ್ ಹೃದಯೋಯ್ (39 ರನ್, 61 ಎಸೆತ, 2 ಬೌಂಡರಿ) ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್ಮೆನ್ಗಳು ಕೂಡ ತಂಡಕ್ಕೆ ನೆರವಾಗಲಿಲ್ಲ.