ವಿಶ್ವ ಚಾಂಪಿಯನ್ ಪಟ್ಟದೊಂದಿಗೆ ತುಂಬಿತು ಇಂಗ್ಲೆಂಡ್ ತಂಡದ ಖಜಾನೆ: ಉಳಿದ ತಂಡಕ್ಕೆ ಎಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಿ20 ವಿಶ್ವಕಪ್​ ಫೈನಲ್ ನಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ ಗೆಲುವು ಸಾದಿಸುವ ಮೂಲಕ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

ಪಾಕ್ ಬೌಲರ್ ಗಳನ್ನು ಕಾಡಿದ ಆಲ್ರೌಂಡರ್‌ ಆಟಗಾರ ಬೆನ್‌ ಸ್ಟೋಕ್ಸ್‌ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ತಂಡಕ್ಕೆ ಕಪ್ ಜೊತೆಗೆ ಭಾರಿ ಮೊತ್ತದ ಬಹುಮಾನದ ಹಣವು ಸಿಕ್ಕಿತು.

ಈ ಬಾರಿಯ ವಿಶ್ವಕಪ್‌ಗೆ ಐಸಿಸಿ ಒಟ್ಟು 45.68 ಕೋಟಿ ಬಹುಮಾನ ಮೊತ್ತವನ್ನು ಘೋಷಿಸಿತ್ತು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಲ್ಲಾ 16 ತಂಡಗಳಿಗು ಈ ಬಹುಮಾನದ ಮೊತ್ತದಲ್ಲಿ ಭಾಗ ಸಿಕ್ಕಿದೆ.

ಚಾಂಪಿಯನ್ ಆದ ಇಂಗ್ಲೆಂಡ್ ತಂಡಕ್ಕೆ ಸುಮಾರು 13.05 ಕೋಟಿ ರೂಗಳನ್ನು ಬಹುಮಾನದ ರೂಪದಲ್ಲಿ ಪಡೆದಿದೆ. ಇದಲ್ಲದೇ ಸೂಪರ್-12 ಸುತ್ತಿನ ಪ್ರತಿ ಪಂದ್ಯದ ಗೆಲುವಿಗೆ ಪ್ರತ್ಯೇಕವಾಗಿ 32.6 ಲಕ್ಷ ರೂ. ಬಹುಮಾನ ನೀಡಲಾಗಿದೆ. ಈ ಪ್ರಕಾರ ಸೂಪರ್ 12 ಸುತ್ತಿನಲ್ಲಿ ಇಂಗ್ಲೆಂಡ್ 3 ಪಂದ್ಯಗಳನ್ನು ಗೆದ್ದಿದ್ದು, ಒಟ್ಟು 97 ಲಕ್ಷಕ್ಕಿಂತ ಹೆಚ್ಚು ಹಣವನ್ನು ತನ್ನ ಖಜಾನೆಗೆ ಹಾಕಿಕೊಂಡಿದೆ. ಈ ಮೂಲಕ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸುಮಾರು 14 ಕೋಟಿ ರೂಪಾಯಿ ಬಹುಮಾನ ಸಿಕ್ಕಂತ್ತಾಗಿದೆ.

ಇನ್ನು ಟೂರ್ನಿಯ ರನ್ನರ್ ಅಪ್ ಆಗಿರುವ ಪಾಕಿಸ್ತಾನ ಸುಮಾರು 6.5 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ಹಾಗೆಯೇ ಸೂಪರ್ 12 ಸುತ್ತಿನಲ್ಲಿ 3 ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ತಂಡದ ಖಾತೆಗೆ ಹೆಚ್ಚುವರಿಯಾಗಿ 97 ಲಕ್ಷಕ್ಕೂ ಅಧಿಕ ಹಣ ಸೇರಲಿದೆ. ಎಲ್ಲಾ ಒಟ್ಟಾರೆಯಾಗಿ ಪಾಕಿಸ್ತಾನಕ್ಕೆ ಸುಮಾರು 7.5 ಕೋಟಿ ರೂ. ಬಹುಮಾನ ಸಿಕ್ಕಂತ್ತಾಗಿದೆ.

ಅಷ್ಟೇ ಅಲ್ಲದೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದತಲಾ 3.6 ಕೋಟಿ ರೂ. ಬಹುಮಾನ ನೀಡಲಾಗಿದೆ. ಭಾರತ ತಂಡ 3.6 ಕೋಟಿ ರೂ. ಜೊತೆಗೆ ಸೂಪರ್-12 ಸುತ್ತಿನ ಗೆಲುವಿಗೂ ಬಹುಮಾನ ಪಡೆಯಲಿದೆ. ಭಾರತ ಕೂಡ ಸೂಪರ್ 12 ಸುತ್ತಿನಲ್ಲಿ 3 ಪಂದ್ಯಗಳನ್ನು ಗೆದ್ದಿರುವುದರಿಂದ ಅದಕ್ಕೂ 97 ಲಕ್ಷಕ್ಕೂ ಹೆಚ್ಚು ಹಣ ಬಹುಮಾನವಾಗಿ ಸಿಗಲಿದೆ. ಅಂದರೆ, ಭಾರತದ ಖಾತೆಗೆ ಸುಮಾರು 4.6 ಕೋಟಿ ರೂಪಾಯಿ ಬಂದು ಬಿದ್ದಂತ್ತಾಗಿದೆ. ನ್ಯೂಜಿಲೆಂಡ್ ಕೂಡ 3 ಪಂದ್ಯಗಳನ್ನು ಭಾರತದಷ್ಟೇ ಬಹುಮಾನದ ಮೊತ್ತವನ್ನು ಪಡೆಯಲಿದೆ.

ಸೂಪರ್-12 ಸುತ್ತಿನಲ್ಲಿಹೊರಬಿದ್ದ 8 ತಂಡಗಳು ತಲಾ 57.08 ಲಕ್ಷ ರೂ. ಬಹುಮಾನ ನೀಡಲಾಗಿದೆ. ಇದಲ್ಲದೇ ಪ್ರತಿ ಗೆಲುವಿಗೆ 32.6 ಲಕ್ಷ ರೂ. ಹೆಚ್ಚುವರಿಯಾಗಿ ಪ್ರತಿ ತಂಡಗಳ ಖಾತೆಗೆ ಸೇರಲಿದೆ. (ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಐರ್ಲೆಂಡ್, ಜಿಂಬಾಬ್ವೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್)

ಎಲಿಮಿನೇಟ್ ತಂಡಕ್ಕೂ ಬಹುಮಾನ
ಎಲಿಮಿನೇಟ್ ಆದ ಪ್ರತಿ ತಂಡಕ್ಕೆ ಸುಮಾರು 32.50 ಲಕ್ಷ ರೂ. ಬಹುಮಾನ ನೀಡಲಾಗಿದೆ. ಇದಲ್ಲದೇ ಈ ಸುತ್ತಿನಲ್ಲಿ ಯಾವುದೇ ಪಂದ್ಯ ಗೆದ್ದರೂ ಆ ಗೆಲುವಿನ ಪ್ರಕಾರ ಹೆಚ್ಚುವರಿಯಾಗಿ 32.50 ಲಕ್ಷ ರೂ. ಅವರ ಖಾತೆಗೆ ಬೀಳಲಿದೆ. ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಯುಎಇ ಈ ಸುತ್ತಿನಲ್ಲಿ ಹೊರಬಿದ್ದಿದ್ದು, ಈ ತಂಡಗಳಿಗೂ ಬಹುಮಾನ ಸಿಕ್ಕಂತ್ತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!