Wednesday, August 10, 2022

Latest Posts

ಇಂಗ್ಲೆಂಡ್-ಟೀಂ ಇಂಡಿಯಾ ಮೊದಲ ಟಿ-20 ಪಂದ್ಯ: ಬೌಲಿಂಗ್​​​​​​ ಆಯ್ದುಕೊಂಡ ಆಂಗ್ಲ ಪಡೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪ್ರವಾಸಿ ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ನಡುವೆ ಮೊದಲ ಟಿ-20 ಪಂದ್ಯ ಅರಂಭಗೊಂಡಿದ್ದು, ಟಾಸ್​ ಗೆದ್ದ ಇಂಗ್ಲೆಂಡ್ ತಂಡ ಬೌಲಿಂಗ್‌ ಆಯ್ದುಕೊಂಡಿದೆ.
ಗುಜರಾತ್​ನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಟಿ-20 ವಿಶ್ವಕಪ್​​ ದೃಷ್ಠಿಯಿಂದ ಈ ಟೂರ್ನಿ ಉಭಯ ತಂಡಗಳಿಗೆ ಮಹತ್ವ ಪಡೆದುಕೊಂಡಿದೆ.
ಹಿಟ್​ಮ್ಯಾನ್​ ರೋಹಿತ್​ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಎಡಗೈ ಬ್ಯಾಟ್ಸಮನ್ ಶಿಖರ್ ಧವನ್​ ಆರಂಭಿಕರಾಗಿ ರಾಹುಲ್ ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.
ಇಂಗ್ಲೆಂಡ್​ 11ರ ಬಳಗ: ಜೇಸನ್​ ರಾಯ್​, ಜೋಸ್​ ಬಟ್ಲರ್​(ವಿ.ಕೀ​), ಡೇವಿಡ್​ ಮಲನ್​, ಜಾನಿ ಬೈರ್​ಸ್ಟೋವ್​, ಇಯಾನ್​ ಮಾರ್ಗನ್(ಕ್ಯಾಪ್ಟನ್​), ಬೆನ್​ ಸ್ಟೋಕ್ಸ್​, ಸ್ಯಾಮ್​ ಕರ್ರನ್​​, ಜೋಫ್ರಾ ಆರ್ಚರ್​, ಕ್ರಿಸ್ ಜೋರ್ಡನ್​, ಆದಿಲ್ ರಾಶೀದ್​, ಮಾರ್ಕ್​ ವುಡ್​
ಇಂಡಿಯಾ 11ರ ಬಳಗ: ಕೆ.ಎಲ್​ ರಾಹುಲ್​, ಶಿಖರ್​ ಧವನ್​, ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಶ್ರೇಯಸ್ ಅಯ್ಯರ್, ರಿಷಭ್​ ಪಂತ್​(ವಿ.ಕೀ) ಹಾರ್ದಿಕ್​ ಪಾಂಡ್ಯ, ವಾಷಿಂಗ್ಟನ್ ಸುಂದರ್​, ಅಕ್ಸರ್​ ಪಟೇಲ್​, ಭುವನೇಶ್ವರ್​ ಕುಮಾರ್, ಶಾರ್ದೂಲ್​ ಠಾಕೂರ್​, ಯಜುವೇಂದ್ರ ಚಹಾಲ್​.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss