ಅಂಡರ್​ 19 ವಿಶ್ವಕಪ್​ ಫೈನಲ್: ಭಾರತದ ಬೌಲಿಂಗ್ ದಾಳಿಗೆ ಮಂಕಾದ ಇಂಗ್ಲೆಂಡ್, ಗೆಲುವಿಗೆ 190ರನ್​ಗಳ ಗುರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂಡರ್​ 19 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ರವಿಕುಮಾರ್ ಮತ್ತು ರಾಜ್​ ಭಾವಾ ಅವರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಆಂಗ್ಲರನ್ನು 189ಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ U19 ತಂಡ ಜೇಮ್ಸ್​ ರಿವ್​ ಅವರ 95 ರನ್​ಗಳ ಹೊರತಾಗಿಯೂ 44.5 ಓವರ್​ಗಳಲ್ಲಿ ಆಲ್ ಔಟ್ ಆಗಿವೆ.
ಭಾರತದ ಪರ ವೇಗಿಗಳಾದ ರವಿಕುಮಾರ್​ 34ಕ್ಕೆ 4, ರಾಜ್​ ಭಾವಾ 31ಕ್ಕೆ 5 ವಿಕೆಟ್ ಪಡೆದು ಆಂಗ್ಲರನ್ನು 200ರ ಗಡಿ ದಾಟದಂತೆ ತಡೆಯುವಲ್ಲಿ ಯಶಸ್ವಿಯಾದರು. ಕೌಶಾಲ್ ತಾಂಬೆ 29ಕ್ಕೆ 1 ವಿಕೆಟ್ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!