Sunday, April 11, 2021

Latest Posts

ಸಿನಿಮಾ‌ ಮಾಡುವುದೇ‌ ನಿಮ್ಮ‌ ಮನರಂಜನೆಗಾಗಿ.. ನಿಮ್ಮ ಮನಸಿಗೆ ನೋವಾಗದಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸಿನಿಮಾ ಮಾಡುವುದು ಜನರಿಗೋಸ್ಕರ, ಅವರಿಗೇ ಹರ್ಟ್ ಆದರೆ ಆ ದೃಶ್ಯವನ್ನು ತೆಗೆದು ಹಾಕುವುದು ನಮ್ಮ ಕರ್ತವ್ಯ ಎಂದು ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಹೇಳಿದ್ದಾರೆ.

ಧ್ರುವ ಸರ್ಜಾ, ಹಿರಿಯ ನಟಿ ತಾರಾ, ನಟ ಚಿಕ್ಕಣ್ಣ, ನಿರ್ದೇಶಕ ನಂದಕಿಶೋರ್, ಸಾರಾ ಗೋವಿಂದು ನೇತೃತ್ವದ ಪೊಗರು ತಂಡ ಇಂದು ಸುದ್ದಿಗೋಷ್ಠಿ ನಡೆಸಿ, ಧ್ರುವ ಸರ್ಜಾ ಕ್ಷಮೆ ಕೇಳಿದ್ದಾರೆ.

ನಿನ್ನೆ ರಾತ್ರಿ  ಟ್ವೀಟ್​ ಮೂಲಕ ಬ್ರಾಹ್ಮಣ ಸಮುದಾಯದ ಬಳಿ ಕ್ಷಮೆ ಕೋರಿದ್ದ ಧ್ರುವ ಸರ್ಜಾ, ಇಂದು ಮತ್ತೆ ಸುದ್ದಿಗೋಷ್ಟಿಯಲ್ಲಿ ಕ್ಷಮೆ ಕೇಳಿದ್ದಾರೆ. ” ಗೊತ್ತಿಲ್ಲದೇ ನನ್ನಿಂದ ತಪ್ಪಾಗಿದೆ, ದಯವಿಟ್ಟು ನನ್ನನ್ನು ಕ್ಷಮಿಸಿ, ನಿಮ್ಮ ಮನೆ ಮಗ ತಪ್ಪು ಮಾಡಿದ್ದಾನೆ ಎಂದು ಕ್ಷಮಿಸಿ ಬಿಡಿ. ಭಾವನೆಗಳಿಗೆ ಧಕ್ಕೆ ತರುವ ದೃಶ್ಯಗಳಿಗೆ ಕತ್ತರಿ ಬೀಳುವವರೆಗೂ ಮಾತನಾಡಬಾರದೆಂದು ಸುಮ್ಮನಿದ್ದೆ. ಇದೀಗ ಪೊಗರು ಸಿನಿಮಾದ 8 ನಿಮಿಷದ ದೃಶ್ಯವನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss