ಕಾಡಿನ ಅತಿಥಿ ರಸ್ತೆಗೆ ಎಂಟ್ರಿ: ಬೊಮ್ಮನಳ್ಳಿ ಬಳಿ ಕರಡಿ ಪ್ರತ್ಯಕ್ಷ
ಹೊಸದಿಗಂತ ವರದಿ ದಾಂಡೇಲಿ: ತಾಲೂಕಿನ ಬೊಮ್ಮನಳ್ಳಿ ಹತ್ತಿರ ರಸ್ತೆಯಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ದಟ್ಟ ಕಾಡಿನ ನಡುವೆ ಇರುವ ರಸ್ತೆ ಭಾಗವತಿ – ಬೊಮ್ಮನಳ್ಳಿ ರಸ್ತೆಯಾಗಿದ್ದು, ಇಲ್ಲಿ ಆನೆ, ಕರಡಿಗಳು ಆಗೊಮ್ಮೆ ಈಗೊಮ್ಮೆ ಎಂಬಂತೆ ದರ್ಶನ ಭಾಗ್ಯವನ್ನು ನೀಡುತ್ತಿದೆ. ಅಂತೆಯೇ ಮಿತ್ರ ಶ್ರೀಶ ರಾವ್ ಅವರು ಭಾಗವತಿಯಿಂದ ದಾಂಡೇಲಿಗೆ ಬರುತ್ತಿದ್ದಾಗ ಬೊಮ್ಮನಳ್ಳಿ ಹತ್ತಿರ ರಸ್ತೆಯಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಕರಡಿಯನ್ನು ನೋಡಿದೊಡನೆಯೇ ದೂರದಲ್ಲಿ ವಾಹನವನ್ನು ನಿಲ್ಲಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಕರಡಿ ರಸ್ತೆ ಬಿಟ್ಟು ಅರಣ್ಯ ಪ್ರದೇಶಕ್ಕೆ ಹೆಜ್ಜೆ ಹಾಕಿದೆ.
Copy and paste this URL into your WordPress site to embed
Copy and paste this code into your site to embed