Wednesday, August 10, 2022

Latest Posts

‘ದೇವರ ಸ್ವಂತ ನಾಡು’ ಕೇರಳ ಈಗ ಮೂಲಭೂತವಾದಿಗಳ ನಾಡಾಗಿದೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

‘ದೇವರ ಸ್ವಂತ ನಾಡು’ ಆಗಿದ್ದ ಕೇರಳ ಈಗ ಮೂಲಭೂತವಾದಿಗಳ ನಾಡಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯಯಾತ್ರೆಯ ಅಂಗವಾಗಿ ತ್ರಿಪ್ಪೂಣಿತ್ತುರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1921ರಲ್ಲಿ ಮಾಪ್ಪಿಳ್ಳ ದಂಗೆಯ ಘೋಷಣೆ ಹಿಂದೂ ಹತ್ಯಾಕಾಂಡ ಆಗಿತ್ತು. ಅದು ಮತ್ತೆ ಇಲ್ಲಿ ಪುನರಾರ್ತನೆ ಆಗುತ್ತಿದೆ. ಸಿಪಿಎಂ ಎಸ್ ಡಿಪಿಐ ಜತೆ ಪರೋಕ್ಷ ಮೈತ್ರಿ ಹೊಂದಿದ್ದರೂ ಎಲ್​ಡಿಎಫ್ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು.
ಸಿಪಿಐ(ಎಂ) ಅಲ್ಪ ಸಂಖ್ಯಾತರ ಪರ ಮಾತ್ರವಲ್ಲ ಮೂಲವಾದಿಗಳ ಪರವೂ ಆಗಿದೆ. ಇಲ್ಲಿ ರಾಜಕೀಯ ಗಲಭೆಗಳು ತಾಂಡವವಾಡುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ವಾಳಯಾರ್ ಅತ್ಯಾಚಾರ ಪ್ರಕರಣ, ಶರತ್ ಲಾಲ್ ಮತ್ತು ಕೃಪೇಶ್​ನ ಹತ್ಯೆ, ಆರ್​ಎಸ್​ಎಸ್ ನಾಯಕ ನಂದ ಕೃಷ್ಣನ ಕೊಲೆ ಇವೆಲ್ಲವೂ ಕೇರಳದಲ್ಲಿನ ರಾಜಕೀಯ ವಿದ್ವೇಷದ ಉದಾರಹಣೆಗಳು. ಸಿಪಿಎಂ ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ ಕೇರಳದಲ್ಲಿಯೂ ರಾಜಕೀಯ ಹಿಂಸಾಚಾರ ಮಾಡಲು ಪ್ರಯತ್ನಿಸುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಕೇರಳದಲ್ಲಿ ಸಂಸದರಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಕೇರಳವನ್ನು ನಿರ್ಲಕ್ಷಿಸಿಲ್ಲ. ಕೇರಳಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಕಾರ್ಯಗಳನ್ನು ಮಾಡಿದೆ. ಎಲ್ಲ ರಾಜ್ಯಗಳೂ ಅಭಿವೃದ್ಧಿಯಾಗಬೇಕು ಎಂಬುದು ಮೋದಿಯವರ ಆಶಯ ಎಂದು ನಿರ್ಮಲಾ ಹೇಳಿದ್ದಾರೆ.
ಕೇರಳದ ರಾಷ್ಟ್ರೀಯ ಹೆದ್ದಾರಿಗಾಗಿ ಕೇಂದ್ರ ಸರ್ಕಾರ 65000ಕೋಟಿ ಅನುದಾನ ನೀಡಿದೆ. ಕೊಚ್ಚಿ ಮೆಟ್ರೊಗೆ 1957 ಕೋಟಿ ಮೊತ್ತ ಅನುದಾನ ನೀಡಿದೆ. ಪುಗಲ್ಲೂರ್ – ತ್ರಿಶ್ಶೂರ್ ಟ್ರಾನ್ಸ್​ಮಿಷನ್ ಯೋಜನೆಗಾಗಿ 5070 ಕೋಟಿ ನೀಡಲಾಗಿದೆ. ಕಾಸರಗೋಡು ಸೋಲಾರ್ ಪವರ್ ಪ್ರಾಜೆಕ್ಟ್, ಅರುವಿಕ್ಕರ್ ವಾಟರ್ ಟ್ರೀಟ್​ಮೆಂಟ್ ಎಲ್ಲ ಯೋಜನೆಗಳು ಇದರಡಿಯಲ್ಲಿದೆ. 47ವರ್ಷಗಳ ಹಿಂದೆ ನಿರ್ಮಾಣ ಆರಂಭಿಸಿದ್ದ ಆಲಪ್ಪುಳ ಬೈಪಾಸ್ ಈಗ ಪೂರ್ಣಗೊಂಡಿದೆ. 47 ವರ್ಷಗಳಾಗಿದ್ದರೂ ಎಲ್​ಡಿಎಫ್ ಅಥವಾ ಯುಡಿಎಫ್​ಗಾಗಲಿ ಈ ಯೋಜನೆ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss