ಭಾರತದಲ್ಲಿ ರೈತನೇ ನಿಜವಾದ ವಿಜ್ಞಾನಿ- ರಾಜ್ಯ ಸಭಾಸದಸ್ಯ ಕಡಾಡಿ

ಹೊಸದಿಗಂತ ವರದಿ ಬೆಳಗಾವಿ: 

ಯಾವದೇ ಪಕ್ಷದ ಪರವಾದ ಪ್ರಚಾರ ಈ ಕಾರ್ಯಕ್ರಮದ ಉದ್ದೇಶ ಅಲ್ಲ, ರಾಜಕೀಯ ಒಂದು ಪ್ರವೃತ್ತಿಗೆ ಅಷ್ಟೇ ಸೀಮಿತ. ಮುಖ್ಯವಾಗಿ ಒಕ್ಕುತನ ರೈತನ ವೃತ್ತಿ, ಕೃಷಿ ವಿಜ್ಞಾನಿಗಿಂತ ರೈತ ನಿಜವಾದ ಪ್ರಾಯೋಗಿಕ ವಿಜ್ಞಾನಿ. ಜಲ್ ಹೈತೋ ಕಲ್ ಹೈ ಎಂಬ ಪರಿಕಲ್ಪನೆ ಅಡಿ ಕೃಷಿ ಸಿಂಚಾಯಿ ಯೋಜನೆ ಜಾರಿಮಾಡಲಾಗಿದೆ. ತಂತ್ರಜ್ಞಾನ ಹಾಗೂ ರೈತನಿಗೆ ಆರ್ಥಿಕ ಉತ್ತೇಜನದ ಕೃಷಿಗೆ ಒತ್ತು ನೀಡಲಾಗುತ್ತಿದೆ ಎಂದು ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಹಾಗು ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ ಹೇಳಿದರು.

ಚಿಕ್ಕೋಡಿ ಪಟ್ಟಣದ ಕೇಶವ ಕಲಾ ಭವನದಲ್ಲಿ ಬುಧವಾರ ಜರುಗಿದ ಆತ್ಮ‌ನಿರ್ಭರ ಕೃಷಿ ಮತ್ತು ಸಿರಿಧಾನ್ಯಗಳ ವರ್ಷಾಚರಣೆ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು, ಇಂದು ರೈತರು 235 ಮಿಲಿಯನ್ ಟನ್ ಆಹಾರ ಉತ್ಪಾದಿಸಿ, ಭಾರತದಿಂದ ದಾಖಲೆ ಮಟ್ಟದ ರಫ್ತಾಗುತತಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ 71 ಸಾವಿರ ರೈತನ ತಲಾ ಆದಾಯ ಇತ್ತು. ಇದೀಗ 1.22 ಲಕ್ಷಕ್ಕೆ ಏರಿದೆ. ಎಂದರು.

ಕಾಂಗ್ರೆಸ್ ಅವಧಿಯಲ್ಲಿ ರೈತನ ಪಾಲಿಗೆ 11% ಮಾತ್ರ ಮೀಸಲಿಡಲಾಗಿತ್ತು. ಬಿಜೆಪಿ ಅವಧಿಯಲ್ಲಿಂದು ಶೇಕಡಾ 20 ರಷ್ಟಿದೆ. ಕಾಂಗ್ರೆಸ್‌ ಅವಧಿಯಲ್ಲಿ 21,933 ಕೋಟಿ ಕೃಷಿ ಬಜೆಟ್ ಇತ್ತು. ಇಂದು ಬಿಜೆಪಿ 1 ಲಕ್ಷ ಕೋಟಿಗೂ ಹೆಚ್ಚು ಕೃಷಿ ಬಜೆಟ್ ಘೋಷಿಸಿದ್ದಾರೆ.

ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಡಾ. ರಾಜೇಶ ನೇರ್ಲಿ, ರಾಜ್ಯ ಕಾರ್ಯದರ್ಶಿ ರವಿಕುಮಾರ ಬಗಲಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪಾ ಬೆಂಡವಾಡೆ, ಜಿಲ್ಲ ರೈತ ಮೋರ್ಚಾ ಅಧ್ಯಕ್ಷ ಸತ್ಯಪ್ಪಾ ನಾಯಕ‌,ಆರ್.ಟಿ ಪಾಟೀಲ, ಶಾಂಭವಿ ಅಶ್ವಥ್ಥಪೂರ, ಮಾಹಾವೀರ ನಾಶಿಪುಡಿ, ಸಂಜಯ ಪಾಟೀಲ ಸೇರಿ ಹಲವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!