ಮೈದಾಹಿಟ್ಟಿನಿಂದ ಮಾಡುವ ಈ ಸ್ವೀಟ್ ಮಕ್ಕಳಿಗೆ ತುಂಬಾನೇ ಇಷ್ಟವಾಗುತ್ತದೆ. ಈ ಸ್ವೀಟ್ ಮಾಡುವುದಕ್ಕೆ ಜಾಸ್ತಿ ಸಮಯ ಬೇಡ. ಮಾಡುವುದು ಕೂಡ ಈಸಿ. ಇಲ್ಲಿದೆ ನೋಡಿ ರೆಸಿಪಿ.
ಬೇಕಾಗುವ ಸಾಮಗ್ರಿ:
ಮೈದಾಹಿಟ್ಟು
ಸಕ್ಕರೆ
ಕಾಯಿತುರಿ- 1 ಕಪ್
ಎಣ್ಣೆ
ಬೆಣ್ಣೆ
ಮಾಡುವ ವಿಧಾನ:
- ಮೊದಲಿಗೆ ಮೈದಾ ಹಿಟ್ಟಿಗೆ ಕಾಯಿತುರಿ, ಸಕ್ಕರೆ, ಬೆಣ್ಣೆ ಹಾಕಿ ಉಂಡೆ ಕಟ್ಟುವ ಹದಕ್ಕೆ ಕಲಸಿಕೊಳ್ಳಿ.
- ಕಲಸಿಕೊಂಡ ನಂತರ 1 ಗಂಟೆ ಹಾಗೆ ಬಿಡಿ.
- ನಂತರ ಅದನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು, ಗೋಲಾಕಾರದಲ್ಲಿ ಕೈಯಿಂದ ತಟ್ಟಿ ಎಣ್ಣೆಯಲ್ಲಿ ಕರಿಯಬೇಕು.
- ತಿನ್ನುವುದಕ್ಕೆ ಬಿಸ್ಕತ್ ರೀತಿಯಲ್ಲಿಯೇ ಇರುತ್ತದೆ.