ಆಪಲ್ ಐಪೋನ್‌ ಚಾರ್ಜಿಂಗ್‌ ಪೋರ್ಟ್‌ ಬದಲಾಯಿಸುವಂತೆ ಒತ್ತಾಯಿಸಿದ ಯುರೋಪಿಯನ್‌ ಯೂನಿಯನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತಿಚಿನ ಬೆಳವಣಿಗೆಯೊಂದರಲ್ಲಿ ಯುರೋಪಿಯನ್‌ ಒಕ್ಕೂಟವು ಸಂಪೂರ್ಣ ಯುರೊಪ್‌ ನಲ್ಲಿ ಐಫೋನ್‌ ಚಾರ್ಜರ್‌ ಗಳನ್ನು ಬದಲಾಯಿಸುವಂತೆ ಜಾಗತಿಕ್‌ ಟೆಕ್‌ ದಿಗ್ಗಜ ಆಪಲ್‌ ಕಂಪನಿಯನ್ನು ಒತ್ತಾಯಿಸಿದೆ.

ಮುಂಬರುವ 2024ರ ವೇಳೆಗೆ ಸಂಪೂರ್ಣ ಯುರೋಪಿನಾದ್ಯಂತ ಎಲ್ಲಾ ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಒಂದೇ ಮಾದರಿಯ ಚಾರ್ಜಿಂಗ್‌ ಪೋರ್ಟ್ ತರಲು ಯೋಚಿಸುತ್ತಿರುವುದರಿಂದ ಆಪಲ್‌ ಕಂಪನಿಯೂ ಕೂಡ ತನ್ನ ಮೊಬೈಲ್ ಗಳು ಹಾಗೂ ಲ್ಯಾಪ್ಟಾಪ್‌ ಗಳ ಚಾರ್ಜಿಂಗ್‌ ಪಾಯಿಂಟ್‌ ಗಳನ್ನು ಬದಲಾಯಿಸಬೇಕೆಂದು ಯುರೋಪಿಯನ್‌ ಒಕ್ಕೂಟ ಒತ್ತಾಯಿಸಿದೆ.

ಮಂಗಳವಾರ ನಡೆದ ಯುರೋಪಿನ್‌ ಒಕ್ಕೂಟದ ಸಭೆಯಲ್ಲಿ ಹೆಚ್ಚಿನ ಬಹುಮತದಿಂದ ಈ ನಿರ್ಣಯವನ್ನು ಅಂಗೀಕರಿಸಲಾಗಿದ್ದು ಅಂಗೀಕೃತ ನಿಯಮದ ಪ್ರಕಾರ ಎಲ್ಲಾ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ Typr-C ಮಾದರಿಯ ಚಾರ್ಜಿಂಗ್‌ ಸ್ಲಾಟ್‌ ಗಳನ್ನು ಅಳವಡಿಸಲು ಯೋಜಿಸಲಾಗಿದೆ. ಆ ಮೂಲಕ ತಾಂತ್ರಿಕತೆಯಲ್ಲಿ ಜಾಗತಿಕವಾಗಿ ಹೊಸ ಸ್ಟಾಂಡರ್ಡ್‌ ಅನ್ನು ಚಾಲ್ತಿಗೆ ತರಲು ಯೋಚಿಸಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಐಫೋನ್‌ ಚಾರ್ಜಿಂಗ್‌ ಸ್ಲಾಟ್‌ ಗಳು ಭಿನ್ನವಾಗಿರುವುದರಿಂದ ತನ್ನ ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ 27 ದೇಶಗಳಾದ್ಯಂತ ಚಾರ್ಜಿಂಗ್‌ ಪೋರ್ಟ್‌ ಗಳನ್ನು ಬದಲಾಯಿಸುವಂತೆ ಒತ್ತಾಯಿಸಲಾಗಿದೆ. 2024ರ ವೇಳೆಗೆ ಐಫೋನ್‌ ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ಮತ್ತು 2026 ವೇಳೆಗೆ ಲ್ಯಾಪ್‌ಟಾಪ್‌ಗಳಿಗೆ ಅದರ ಚಾರ್ಜಿಂಗ್ ಪೋರ್ಟ್‌ಗಳನ್ನು ಬದಲಾಯಿಸಲು ಆಪಲ್‌ ಕಂಪನಿಗೆ ಯುರೋಪಿಯನ್‌ ಒಕ್ಕೂಟವು ಒತ್ತಾಯಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!