spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚೀನಾದ ಪ್ರಭಾವ ಎದುರಿಸಲು ಐರೋಪ್ಯ ಒಕ್ಕೂಟದ 340 ಬಿಲಿಯನ್ ಡಾಲರ್ ಯೋಜನೆ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಪ್ರಭಾವ ಎದುರಿಸಲು ಐರೋಪ್ಯ ಒಕ್ಕೂಟ 340 ಬಿಲಿಯನ್ ಡಾಲರ್ ಹೂಡಿಕೆ ಯೋಜನೆ ಆರಂಭಿಸಲು ಚಿಂತಿಸಿದ್ದು, ವಿವರಗಳನ್ನು ಬಹಿರಂಗಪಡಿಸಿದೆ.

ಚೈನಾದ ರೋಡ್ ಹಾಗೂ ಬೆಲ್ಟ್ ತಂತ್ರಕ್ಕೆ ಪ್ರತಿತಂತ್ರ ಹೂಡುವ ಯೋಜನೆ ಇದಾಗಿರಲಿದೆ. 340 ಬಿಲಿಯನ್ ಡಾಲರ್ ಯೋಜನೆಯಾದ ಗ್ಲೋಬಲ್ ಗೇಟ್‌ವೇ ವಿಶ್ವಾಸಾರ್ಹ ಬ್ರಾಂಡ್ ಆಗಬೇಕು ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್‌ಡೆರ್ ಲೇಯನ್ ಅಭಿಪ್ರಾಯಪಟ್ಟಿದ್ದಾರೆ.

ರಸ್ತೆಗಳು, ರೈಲು ಮತ್ತು ಬಂದರುಗಳ ನಿರ್ಮಾಣಕ್ಕೆ ಚೀನಾ ಹಣ ನೀಡಿದೆ, ಆದರೆ ಇದೇ ನೆಪದಲ್ಲಿ ಅದೆಷ್ಟೋ ದೇಶಗಳನ್ನು ಸಾಲದಲ್ಲಿ ಮುಳುಗಿಸಿರುವ ಆರೋಪ ಕೂಡ ಚೀನಾದ ಮೇಲಿದೆ.

ಈ ಹಿನ್ನೆಲೆ ಸಮರ್ಥನೀಯ ಯೋಜನೆಗಳನ್ನು ವಿನ್ಯಾಸಗೊಳಿಸಲು ದೇಶಗಳಿಗೆ ವಿಶ್ವಾಸಾರ್ಹ ಪಾಲುದಾರರ ಅಗತ್ಯವಿದೆ ಎಂದು ಆಯೋಗದ ಮುಖ್ಯಸ್ಥರು ಹೇಳಿದ್ದಾರೆ.

ಸದಸ್ಯ ರಾಷ್ಟ್ರಗಳು, ಹಣಕಾಸು ಸಂಸ್ಥೆಗಳು ಮತ್ತು ಖಾಸಗಿ ವಲಯಗಳಿಂದ ಈಗಾಗಲೇ ಪಡೆದಿರುವ ಶತಕೋಟಿ ಯೂರೋಗಳನ್ನು ಬಳಸಿಕೊಂಡು ಈ ಯೋಜನೆ ರೂಪಿಸಲಾಗುತ್ತಿದೆ. ಇವೆಲ್ಲಾ ಅನುದಾನಕ್ಕಿಂತ ಹೆಚ್ಚಾಗಿ ಸಾಲ ಅಥವಾ ಲೋನ್‌ನ ರೂಪ ಪಡೆಯಲಿವೆ.

ವಿಭಿನ್ನ, ಪ್ರಜಾಪ್ರಭುತ್ವದ ಮಾದರಿ ಅಳವಡಿಸಿಕೊಂಡು, ಹವಾಮಾನ ಬದಲಾವಣೆ ಹಾಗೂ ಆರೋಗ್ಯದ ಸವಾಲುಗಳಿಗೂ ಸ್ಪಂದಿಸುತ್ತ, ಅಭಿವೃದ್ಧಿ ಹೊದುತ್ತಿರುವ ದೇಶಗಳಿಗೆ ಸುಸ್ಥಿರ ಯೋಜನೆಯೊಂದನ್ನು ಕೊಡುವುದಕ್ಕೆ ಸಾಧ್ಯ ಎಂಬುದನ್ನು ಒಕ್ಕೂಟ ನಿರೂಪಿಸಲಿದೆ ಎಂದು ವಾನ್ ಡೆರ್ ಲೇಯನ್ ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss