ಆಗಸ ಮಾತ್ರವಲ್ಲ, ಸಾಗರದಾಳದಲ್ಲಿಯೂ ಗತ್ತು, ಗಾಂಭೀರ್ಯ ತೋರಿದ ತಿರಂಗ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾನಿನಗಲವಷ್ಟೇ ಅಲ್ಲಾ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಾಗರದಾಳದಲ್ಲೂ ನಮ್ಮ ತಿರಂಗ ರಾರಾಜಿಸುತ್ತಿದೆ!ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ, ಸಿದ್ಧತೆ ಎಲ್ಲೆಡೆ ಕಂಡುಬರುತ್ತಿದ್ದು, ಈಗ ಹರ್​ ಘರ್​ ತಿರಂಗಾ ಅಭಿಯಾನಕ್ಕೆ ಸಾಥ್ ನೀಡಿರುವ ಭಾರತೀಯ ಕೋಸ್ಟ್​ ಗಾರ್ಡ್​ ಸಮುದ್ರದೊಳಗೇ ರಾಷ್ಟ್ರ ಧ್ವಜ ಹಾರಿಸಿ ದೇಶಪ್ರೇಮ ಇನ್ನಷ್ಟು ಜಾಗೃತಗೊಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೋಸ್ಟ್ ಗಾಡ್೯ ಅಧಿಕಾರಿಗಳು, ನಾಗರೀಕರಲ್ಲಿ ದೇಶಭಕ್ತಿ ಇನ್ನಷ್ಟು ಜಾಗೃತಗೊಳಿಸುವುದು, ರಾಷ್ಟ್ರಧ್ವಜದ ಮೇಲೆ ಗೌರವ ಹೆಚ್ಚಿಸುವುದು ಇದರ ಉದ್ದೇಶ ಎಂದಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಹರ್ ಘರ್ ತಿಂರಗಾ ಅಭಿಯಾನಕ್ಕೆ ದೇಶದಲ್ಲಿ ಸಿದ್ಧತೆ ಅರಂಭವಾಗಿದ್ದು, ಮನೆ ಮನೆಗಳಲ್ಲಿಯೂ ದೇಶದ ರಾಷ್ಟ್ರಧ್ವಜ ಹಾರಿಸಲು ಖುದ್ದು ಪ್ರಧಾನಿಯವರೇ ಚಾಲನೆ ನೀಡಿದ್ದಾರೆ. ಆ.13ರಿಂದ 15ರವರೆಗೆ ದೇಶಾದ್ಯಂತ ಮನೆ ಮನೆಗಳಲ್ಲಿ ಧ್ವಜ ಹಾರಾಡಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!