ರಾಜಧಾನಿ ಬೆಂಗಳೂರಿನಲ್ಲೂ ಕತ್ತಲು, ಈ ಏರಿಯಾಗಳಲ್ಲಿ ಸಂಜೆವರೆಗೂ ಕರೆಂಟಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನ ಕೆಲ ಏರಿಯಾಗಳಲ್ಲಿ ಇಂದು ಕತ್ತಲು ಆವರಿಸಲಿದೆ. ಈ ಏರಿಯಾಗಳಲ್ಲಿ ಸಂಜೆವರೆಗೂ ಕರೆಂಟಿಲ್ಲ! ಯಾವ ಏರಿಯಾ ನೋಡಿ..

ವಿದ್ಯುತ್ ಪರಿವರ್ತಕಗಳಲ್ಲಿನ ನಿರ್ವಹಣೆ ಕಾರಣ ನೀಡಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಬ್ಯಾಟರಾಯನಪುರ, ಸಹಕಾರನಗರ, ಅಮೃತ ಹಳ್ಳಿ, ಜಕ್ಕೂರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲಿದೆ.  ಕಾರನಗರ 66/11 ಕೆವಿ ವಿದ್ಯುತ್‌ ಕೇಂದ್ರ ಹಾಗೂ ಬಳ್ಳಾರಿ ಮುಖ್ಯ ರಸ್ತೆ, ಜಿ ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಬಿಜಿಎಸ್ ಲೇಔಟ್, ನವ್ಯನಗರ ಬ್ಲಾಕ್, ಶಬರಿನಗರ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯಶೋಧನಗರ, ಅಮೃತಹಳ್ಳಿ ಬಿ ಮತ್ತು ಸಿ ಬ್ಲಾಕ್, ಸಿಕ್ಯುಎಎಲ್ ಲೇ ಔಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಕೋಗಿಲು ಬಡಾವಣೆ, ಅಗ್ರಹಾರ ಬಡಾವಣೆ, ಅರ್ಕಾವತಿ ಬಡಾವಣೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!